ADVERTISEMENT

ಇಂಗಾಲ ಮುಕ್ತಗೊಳಿಸುವಿಕೆ | ಮುಂಚೂಣಿಯಲ್ಲಿ ಕರ್ನಾಟಕ: ವರದಿ

ಪಿಟಿಐ
Published 24 ಫೆಬ್ರುವರಿ 2026, 0:10 IST
Last Updated 24 ಫೆಬ್ರುವರಿ 2026, 0:10 IST
   

ಮುಂಬೈ: ವಿದ್ಯುತ್‌ ವ್ಯವಸ್ಥೆಗಳನ್ನು ಇಂಗಾಲ ಮುಕ್ತಗೊಳಿಸುವ ನಿಟ್ಟಿನಲ್ಲಿ ಕರ್ನಾಟಕವು ದೇಶದಲ್ಲಿಯೇ ಮುಂಚೂಣಿಯಲ್ಲಿದೆ ಎಂದು ಇಂಧನ ಆರ್ಥಿಕತೆ ಮತ್ತು ಹಣಕಾಸು ವಿಶ್ಲೇಷಣೆ ಸಂಸ್ಥೆ (ಐಇಇಎಫ್‌ಎ) ಮತ್ತು ಎಂಬರ್‌ ಜಂಟಿಯಾಗಿ ಪ್ರಕಟಿಸಿರುವ ಹೊಸ ವರದಿ ತಿಳಿಸಿದೆ. 

ವಿದ್ಯುತ್ ಜಾಲ ವ್ಯವಸ್ಥೆಗೆ ಪರಿಣಾಮಕಾರಿಯಾಗಿ ಮರುಬಳಕೆ ಇಂಧನ ಮೂಲಗಳನ್ನು ಸೇರ್ಪಡೆಗೊಳಿಸುವಲ್ಲಿ ರಾಜ್ಯ ಅಗ್ರಗಣ್ಯವಾಗಿದೆ ಎಂದು ವರದಿ ಹೇಳಿದೆ. 

ಕರ್ನಾಟಕದ ಜತೆಗೆ ಹಿಮಾಚಲ ಪ್ರದೇಶ ಮತ್ತು ಕೇರಳ ಸಹ ಮಹತ್ವದ ಸಾಧನೆ ಮಾಡಿವೆ ಎಂದು ಅದು ಉಲ್ಲೇಖಿಸಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.