ADVERTISEMENT

‘ಸೆ.30ರೊಳಗೆ ಕಾರಿಡಾರ್ ಕಾಮಗಾರಿ ಪೂರ್ಣ’

​ಪ್ರಜಾವಾಣಿ ವಾರ್ತೆ
Published 1 ಜೂನ್ 2019, 18:36 IST
Last Updated 1 ಜೂನ್ 2019, 18:36 IST

ಚಂಡಿಗಡ: ಕರ್ತಾರ್‌ಪುರ ಕಾರಿಡಾರ್ ಯೋಜನೆಯ ಭಾರತದ ಕಡೆಯ ಕಾಮಗಾರಿ ಸೆಪ್ಟೆಂಬರ್‌ 30ರೊಳಗೆ ಪೂರ್ಣಗೊಳ್ಳಲಿದೆ ಎಂದು ಪಂಜಾಬ್‌ನ ಲೋಕೋಪಯೋಗಿ ಸಚಿವ ವಿಜಯ್‌ ಇಂದರ್ ಸಿಂಗ್ಲಾ ಶನಿವಾರ ಹೇಳಿದ್ದಾರೆ.

ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಭೇಟಿ ನೀಡಿಪರಿಶೀಲನೆ ನಡೆಸಿದ ಬಳಿಕ ಮಾತನಾಡಿದ ಸಚಿವರು, ’ಭಾರತದ ಕಡೆಯ ಕಾರಿಡಾರ್‌ನ ಉದ್ದವು 4.2 ಕಿ.ಮೀ ಇದ್ದು, ಅದರಲ್ಲಿ 3.6 ಕಿ. ಮೀ. ಉದ್ದದ ರಸ್ತೆಯು ವಿಶಾಲವಾಗಿದೆ ಮತ್ತು ಎರಡೂ ಬದಿ ಪಾದಚಾರಿ ಮಾರ್ಗ ಇರಲಿದೆ‘ ಎಂದಿದ್ದಾರೆ.

ಯಾತ್ರಿಕರಿಗೆ ವಿಶ್ವ ಮಟ್ಟದ ಮೂಲ ಸೌಕರ್ಯಗಳನ್ನು ಕಲ್ಪಿಸಲಾಗುವುದು ಎಂದೂ ಹೇಳಿದ್ದಾರೆ.

ADVERTISEMENT

₹116 ಕೋಟಿ ವೆಚ್ಚದ ಈ ಯೋಜನೆಗಾಗಿ ಈಗಾಗಲೇ 62 ಎಕರೆ ಜಮೀನನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.