ADVERTISEMENT

ಕಾಶ್ಮೀರ ಬಿಟ್ಟು ತೆರಳುತ್ತಿರುವ ಪಂಡಿತರನ್ನು ತಡೆಯುತ್ತಿರುವ ಅಧಿಕಾರಿಗಳು

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಜೂನ್ 2022, 16:33 IST
Last Updated 2 ಜೂನ್ 2022, 16:33 IST
ಕಾಶ್ಮೀರಿ ಪಂಡಿತ ಸಮುದಾಯದ ಪ್ರತಿಭಟನೆಗೆ ಸೇನೆಯ ಭದ್ರತೆ
ಕಾಶ್ಮೀರಿ ಪಂಡಿತ ಸಮುದಾಯದ ಪ್ರತಿಭಟನೆಗೆ ಸೇನೆಯ ಭದ್ರತೆ    

ಶ್ರೀನಗರ: ಸೂಕ್ತ ಭದ್ರತೆ ಒದಗಿಸುವ ಮತ್ತು ಸುರಕ್ಷತಾ ಪ್ರದೇಶಗಳಲ್ಲಿ ಕೆಲಸಕ್ಕೆ ಅವಕಾಶ ನೀಡುವ ಭರವಸೆಯ ಹೊರತಾಗಿಯೂ ಕಾಶ್ಮೀರಿ, ಕಾಶ್ಮೀರ ತೊರೆಯುತ್ತಿದ್ದಾರೆ.

ಆದರೆ ಪೊಲೀಸ್ ಚೆಕ್‌ಪೋಸ್ಟ್‌ಗಳಲ್ಲಿ ಅವರನ್ನು ತಡೆದು ಅಧಿಕಾರಿಗಳು ವಾಪಸ್ ಕಳುಹಿಸುತ್ತಿದ್ದಾರೆ.

ಕಾಶ್ಮೀರಿ ಪಂಡಿತರ ಭದ್ರತೆಗೆ ಸೂಕ್ತ ಕ್ರಮ ಕೈಗೊಳ್ಳುತ್ತೇವೆ ಎಂದು ಸರ್ಕಾರ ಹೇಳಿದರೂ, ಉಗ್ರರ ದಾಳಿ ಭೀತಿ ಮತ್ತು ಹತ್ಯೆ ಬೆದರಿಕೆ ಅವರನ್ನು ಕಾಶ್ಮೀರ ಬಿಟ್ಟು ಹೋಗುವಂತೆ ಮಾಡುತ್ತಿದೆ ಎನ್ನಲಾಗಿದೆ. ಹೀಗಾಗಿ ಮಂಗಳವಾರ ಮತ್ತು ಬುಧವಾರ ಹಲವು ಕಾಶ್ಮೀರಿ ಪಂಡಿತರ ಕುಟುಂಬಗಳು ಬಾರಮುಲ್ಲಾ ಪ್ರದೇಶ ತೊರೆದು ಹೋಗುತ್ತಿವೆ.

ADVERTISEMENT

ಕಾಶ್ಮೀರದ ವಿವಿಧ ಪ್ರದೇಶಗಳಲ್ಲಿ ಇರುವ ಕ್ಯಾಂಪ್‌ಗಳಲ್ಲಿ ಪಂಡಿತರ ಕುಟುಂಬಗಳು ಉಳಿದುಕೊಂಡಿವೆ. ಆದರೆ ಅವರು ಅಲ್ಲಿಂದ ತೆರಳದಂತೆ ಅಧಿಕಾರಿಗಳು ತಡೆಯೊಡ್ಡುತ್ತಿದ್ದಾರೆ.

ಸರ್ಕಾರದ ವಿವಿಧ ಇಲಾಖೆಗಳಲ್ಲಿ ಕೆಲಸ ನಿರ್ವಹಿಸುವವರ ಕುಟುಂಬದವರ ಮೇಲೂ ಪೊಲೀಸರು ನಿಗಾ ಇರಿಸಿದ್ದಾರೆ. ನಗರ ಬಿಟ್ಟು ಹೋಗದಂತೆ ಸೂಚಿಸುತ್ತಿದ್ದಾರೆ ಎಂದು ಸರ್ಕಾರಿ ಉದ್ಯೋಗಿ ಅಶ್ವನಿ ಸಾಧು ಹೇಳಿದ್ದಾರೆ.

ಜತೆಗೆ, ಕಾಶ್ಮೀರಿಪಂಡಿತರ ಕುಟುಂಬಗಳು ಇರುವ ಪ್ರದೇಶಗಳಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದು, ಪ್ರತಿಭಟನೆ ನಡೆಸದಂತೆ ಕೇಳಿಕೊಂಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.