ADVERTISEMENT

ಡಿಸೆಂಬರ್‌ನಲ್ಲೂ ಪೂರ್ಣಗೊಳ್ಳದ ‘ಕವಚ್‌’ ಅಳವಡಿಕೆ

ಪಿಟಿಐ
Published 27 ಡಿಸೆಂಬರ್ 2025, 14:13 IST
Last Updated 27 ಡಿಸೆಂಬರ್ 2025, 14:13 IST
...
...   

ನವದೆಹಲಿ: ನವದೆಹಲಿ–ಮುಂಬೈ ಮತ್ತು ನವದೆಹಲಿ–ಹೌರಾ ನಡುವಿನ ರೈಲು ಮಾರ್ಗಗಳಲ್ಲಿ ಪ್ರಸಕ್ತ ಸಾಲಿನ ಡಿಸೆಂಬರ್ ಒಳಗಾಗಿ ಸ್ವಯಂಚಾಲಿತ ರಕ್ಷಣಾ ವ್ಯವಸ್ಥೆ ‘ಕವಚ್‌’ ಅನ್ನು ಅಳವಡಿಸಲು ರೈಲ್ವೆ ಸಚಿವಾಲಯ ವಿಫಲವಾಗಿದ್ದು, 2026ರ ವೇಳೆ ಈ ಕಾರ್ಯವನ್ನು ಪೂರ್ಣಗೊಳಿಸುವ ವಿಶ್ವಾಸವನ್ನು ಅಧಿಕಾರಿಗಳು ವ್ಯಕ್ತಪಡಿಸಿದ್ದಾರೆ.

‘ಕಚವ್‌’ ಅಳವಡಿಕೆಯ ಶೇ 25ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಉಳಿದ ಭಾಗಗಳಲ್ಲಿ ಬಹುತೇಕ ಬಿಡಿಭಾಗಗಳು ಮತ್ತು ಉಪಕರಣಗಳನ್ನು ತಂದಿರಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ನವದೆಹಲಿ–ಮುಂಬೈ-ಹೌರಾ ಮಾರ್ಗಗಳಲ್ಲಿ ‘ಕವಚ್‌’ ಅಳವಡಿಕೆ ಕಾರ್ಯ 2025 ಮಾರ್ಚ್‌ನಲ್ಲಿ ಪೂರ್ಣಗೊಳ್ಳಲಿದೆ ಎಂದು ರೈಲ್ವೆ ಸಚಿವಾಲಯವು 2024 ಆಗಸ್ಟ್‌ನಲ್ಲಿ ತಿಳಿಸಿತ್ತು. ಬಳಿಕ ಈ ಗಡುವನ್ನು ಡಿಸೆಂಬರ್‌ಗೆ ವಿಸ್ತರಿಸಿತ್ತು. ಆದರೆ ಕಾಮಗಾರಿ ಇನ್ನು ಪೂರ್ಣಗೊಂಡಿಲ್ಲ.

ADVERTISEMENT

‘ಕವಚ್‌’ ದೇಶಿ ನಿರ್ಮಿತ ಸುರಕ್ಷತಾ ವ್ಯವಸ್ಥೆಯಾಗಿದ್ದು, ಉನ್ನತ ತಂತ್ರಜ್ಞಾನ ವ್ಯವಸ್ಥೆಯನ್ನು ಒಳಗೊಂಡಿರುತ್ತದೆ. ರೈಲಿನ ಬ್ರೇಕ್ ಹಾಕಲು ಲೋಕೊ ಪೈಲಟ್‌ ವಿಫಲವಾದರೆ ಸ್ವಯಂಚಾಲಿತ ಬ್ರೇಕ್‌ ಕಾರ್ಯನಿರ್ವಹಿಸಿ ರೈಲು ನಿಗದಿತ ವೇಗದಲ್ಲಿ ಚಲಿಸುವಂತೆ ಮಾಡುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.