ADVERTISEMENT

ತೆಲಂಗಾಣ | ಯೋಜನೆಗೆ ಚಾಲನೆ ನೀಡಲು ಪ್ರಿಯಾಂಕಾ ಗಾಂಧಿ: ಕವಿತಾ ಆಕ್ಷೇಪ

ಪಿಟಿಐ
Published 3 ಫೆಬ್ರುವರಿ 2024, 10:39 IST
Last Updated 3 ಫೆಬ್ರುವರಿ 2024, 10:39 IST
ಕೆ. ಕವಿತಾ 
ಕೆ. ಕವಿತಾ    

ಹೈದರಾಬಾದ್‌: ₹500ಕ್ಕೆ ಅಡುಗೆ ಅನಿಲ ಸಿಲಿಂಡರ್‌ ನೀಡುವ ಯೋಜನೆಗೆ ಚಾಲನೆ ನೀಡಲು ಕಾಂಗ್ರೆಸ್‌ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರ ಅವರನ್ನು ಆಹ್ವಾನಿಸಲಾಗುವುದು ಎನ್ನುವ ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ಹೇಳಿಕೆಗೆ, ಬಿಆರ್‌ಎಸ್ ಪಕ್ಷದ ನಾಯಕಿ ಕೆ. ಕವಿತಾ ಅವರು ಆಕ್ಷೇ‍ಪ ವ್ಯಕ್ತಪಡಿಸಿದ್ದಾರೆ.

‘ಕಾರ್ಯಕ್ರಮಕ್ಕೆ ಆಹ್ವಾನಿಸಲು ಪ್ರಿಯಾಂಕಾ ಗಾಂಧಿಯವರಿಗೆ ಇರುವ ಅರ್ಹತೆ ಏನು? ದೇಶದ ಯಾವುದೇ ಗ್ರಾಮದಲ್ಲಿ ಸರಪಂಚ ಚುನಾವಣೆಯಲ್ಲಿ ಗೆದ್ದಿದ್ದಾರೆಯೇ? ಎಂ.ಎಲ್‌.ಎ ಅಥವಾ ಎಂ.ಎಲ್‌.ಸಿ.ಯೇ? ನಮ್ಮ ರಾಜ್ಯದಲ್ಲಿ ಯಾವುದಾದರೂ ಸರ್ಕಾರಿ ಶಿಷ್ಟಾಚಾರ ಹೊಂದಿದ್ದಾರೆಯೇ?’ ಎಂದು ಅವರು ಪ್ರಶ್ನೆ ಮಾಡಿದ್ದಾರೆ.

ಒಂದು ವೇಳೆ ಪ್ರಿಯಾಂಕಾ ಗಾಂಧಿಯವರನ್ನು ಆಹ್ವಾನಿಸಿದರೆ ಕಪ್ಪು ಬಲೂನು ಹಾರಿಸಿ ಪ್ರತಿಭಟಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ADVERTISEMENT

ಜಾರ್ಖಂಡ್‌ ಶಾಸಕರು ಹೈದರಾಬಾದ್‌ನಲ್ಲಿ ಬೀಡು ಬಿಟ್ಟಿರುವುದರ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ವಿಮಾನ ನಿಲ್ದಾಣದಲ್ಲಿ ಬಂದಿಳಿದ ಶಾಸಕರನ್ನು, ಸಚಿವರೊಬ್ಬರು ಐಷಾರಾಮಿ ರೆಸಾರ್ಟ್‌ಗೆ ಬೆಂಗಾವಲು ಸಹಿತ ಕರೆದುಕೊಂಡು ಬಂದಿದ್ದು, ಸಾರ್ವಜನಿಕರ ಹಣ ವ್ಯರ್ಥವಲ್ಲವೇ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.