ADVERTISEMENT

ಕೇರಳದಲ್ಲಿ ಒಂದಾದ ರಾಜಕೀಯ ಬದ್ಧ ವೈರಿಗಳು: ಎಲ್‌ಡಿಎಫ್‌–ಯುಡಿಎಫ್‌ ಒಂದೇ ವೇದಿಕೆಗೆ

​ಪ್ರಜಾವಾಣಿ ವಾರ್ತೆ
Published 16 ಡಿಸೆಂಬರ್ 2019, 13:59 IST
Last Updated 16 ಡಿಸೆಂಬರ್ 2019, 13:59 IST
   

ತಿರುವನಂತಪುರ: ಕೇರಳದ ರಾಜಕೀಯದ ಮಟ್ಟಿಗೆ ಬದ್ಧ ವೈರಿಗಳು ಎಂದೇ ಕರೆಸಿಕೊಳ್ಳುವ ಸಿಪಿಎಂ ನೇತೃತ್ವದ ಎಲ್‌ಡಿಎಫ್‌ ಮತ್ತು ಕಾಂಗ್ರೆಸ್‌ ನೇತೃತ್ವದ ಯುಡಿಎಫ್‌ ಇದೇ ಮೊದಲ ಬಾರಿಗೆ ಒಂದೇ ವೇದಿಕೆಗೆ ಬಂದಿವೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಪೌರತ್ವ ತಿದ್ದುಪಡಿ ಕಾಯ್ದೆಯನ್ನು ಎರಡೂ ಕೂಟಗಳೂ ವಿರೋಧಿಸಿದ್ದು, ಸೋಮವಾರ ಒಂದೇ ವೇದಿಕೆಯಡಿ ಪ್ರತಿಭಟಿಸಿದವು.

ಎಲ್‌ಡಿಎಫ್‌ ನೇತೃತ್ವ ವಹಿಸಿದ್ದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌ ಮತ್ತು ವಿರೋಧ ಪಕ್ಷದ ನಾಯಕ ಯುಡಿಎಫ್‌ನ ರಮೇಶ್‌ ಚೆನ್ನಿಟ್ಟಾಲ ಪ್ರತಿಭಟನಾ ನೇತೃತ್ವ ವಹಿಸಿದ್ದರು.

ADVERTISEMENT

‘ಸಂವಿಧಾನದತ್ತವಾಗಿ ಬಂದಿರುವ ಜೀವಿಸುವ ಹಕ್ಕನ್ನು ಕೇಂದ್ರ ಸರ್ಕಾರದ ಹೊಸ ಕಾಯ್ದೆ ಕಸಿಯುತ್ತಿದೆ,’ ಎಂದು ಎರಡೂ ಕೂಟಗಳ ನಾಯಕರು ಪ್ರತಿಭಟನೆಯಲ್ಲಿ ಒತ್ತಿ ಹೇಳಿದರು.

‘ಸಂವಿಧಾನದ 14ನೇ ಪರಿಚ್ಛೇದವು ನಾಗರಿಕರಿಗೆ ಸಮಾನತೆ ಹಕ್ಕು ನೀಡಿದೆ. ಯಾವುದೇ ಕಾನೂನು ಇದಕ್ಕೆ ವಿರುದ್ಧವಾಗಿದ್ದರೆ ಅದು ಅಸಾಂವಿಧಾನಿಕ. ಕೇಂದ್ರ ಸರ್ಕಾರ ಶ್ರೀಲಂಕಾದ ತಮಿಳರು, ರೋಹಿಂಗ್ಯಾಗಳ ಬಗ್ಗೆ ಮೌನ ವಹಿಸುತ್ತದೆ. ಸದ್ಯ ಜಾರಿಗೆ ತಂದಿರುವ ಈ ಕಾನೂನನ್ನು ವಿಶ್ವಸಂಸ್ಥೆಯೇ ವಿರೋಧಿಸಿದೆ,’ ಎಂದು ಪಿಣಾರಾಯಿ ವಿಜಯನ್‌ ತಿಳಿಸಿದರು.

ದೇಶದಲ್ಲಿ ಉಂಟಾಗಿರುವ ಈ ಅಶಾಂತಿಯನ್ನು ಉದ್ದೇಶಪೂರ್ವಕವಾಗಿಯೇ ಸೃಷ್ಟಿಯಾದದ್ದು ಎಂದೂ ಅವರು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.