ADVERTISEMENT

ಕೇರಳ: ನಗರ ಪಾಲಿಕೆಯ ಬಿಜೆಪಿ ಆಯುಕ್ತ ಆತ್ಮಹತ್ಯೆ

ಪಿಟಿಐ
Published 20 ಸೆಪ್ಟೆಂಬರ್ 2025, 7:43 IST
Last Updated 20 ಸೆಪ್ಟೆಂಬರ್ 2025, 7:43 IST
   

ತಿರುವನಂತಪುರ: ತಿರುವನಂತಪುರದ ನಗರ ಪಾಲಿಕೆಯ ತಿರುಮಲ ವಾರ್ಡ್‌ನ ಬಿಜೆಪಿ ಆಯುಕ್ತ ಅನಿಲ್‌ ಕುಮಾರ್‌ ತಮ್ಮ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಶನಿವಾರ ಪೊಲೀಸರು ತಿಳಿಸಿದ್ದಾರೆ.

ಸ್ಥಳೀಯರು ಹೇಳಿರುವಂತೆ, ಅನಿಲ್‌ ಕುಮಾರ್ ತಮ್ಮ ಕಚೇರಿಯಲ್ಲಿ ಬೆಳಗ್ಗೆ 9 ಗಂಟೆಯ ಸುಮಾರಿಗೆ ಆತ್ಮಹತ್ಯೆ ಮಾಡುಕೊಂಡಿದ್ದಾರೆ ಎಂಬ ಮಾಹಿತಿಯನ್ನು ಆಧರಿಸಿ ಪೋಲಿಸರು ಪ್ರಕರಣವನ್ನು ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.  

ಅನಿಲ್ ಕುಮಾರ್‌ ನೇತೃತ್ವದ ಸಹಕಾರಿ ಸಂಘವೊಂದರಲ್ಲಿ ಹಣಕಾಸಿನ ಸಮಸ್ಯೆ ಎದುರಾಗಿತ್ತು. ಇದರಿಂದಾಗಿ ಅವರು ಸ್ವಲ್ಪ ದಿನಗಳಿಂದ ಅಸಮಾಧಾನಗೊಂಡಿದ್ದರು. ಅವರ ದೇಹದ ಬಳಿ ಮರಣ ಪತ್ರ ಪತ್ತೆಯಾಗಿದ್ದು, ಪತ್ರದಲ್ಲಿ ಬಿಜೆಪಿ ನಾಯಕರ ವಿರುದ್ಧದ ಹೇಳಿಕೆಗಳಿವೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿವೆ. ಆದರೆ ಮರಣ ಪತ್ರ ಇದ್ದದ್ದರ ಬಗ್ಗೆ ಪೊಲೀಸರು ಯಾವುದೇ ಸ್ಪಷ್ಟನೆ ನೀಡಿಲ್ಲ.  

ADVERTISEMENT

ಬ್ಯಾಂಕಿನಲ್ಲಿ ಸಾಲ ಪಡೆದ ಹಲವರು ಸಾಲದ ಮೊತ್ತವನ್ನು ಮರುಪಾವತಿಸಿಲ್ಲ. ಇದರಿಂದಾಗಿ ಅನಿಲ್‌ ಕುಮಾರ್‌ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು ಎಂದು  ಬಿಜೆಪಿ ಜಿಲ್ಲಾಧ್ಯಕ್ಷ ವಿ.ವಿ. ರಾಜೇಶ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.