ಲೈಂಗಿಕ ದೌರ್ಜನ್ಯ –ಪ್ರಾತಿನಿಧಿಕ ಚಿತ್ರ
ತಿರುವನಂತಪುರ: ಕೇರಳ ಕ್ರಿಕೆಟ್ ಅಸೋಸಿಯೇಷನ್‌ನ (ಕೆಸಿಎ) ಮಾಜಿ ಕೋಚ್‌ವೊಬ್ಬರು ಹದಿಹರೆಯದ ಮಹಿಳಾ ಕ್ರಿಕೆಟ್ ಆಟಗಾರ್ತಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಮಾನವ ಹಕ್ಕುಗಳ ಆಯೋಗ ಪ್ರಕರಣ ದಾಖಲಿಸಿದೆ.
ಪ್ರಕರಣ ಸಂಬಂಧ ಮಾಧ್ಯಮಗಳ ವರದಿ ಆಧರಿಸಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿದೆ. ಲೈಂಗಿಕ ದೌರ್ಜನ್ಯ ಆರೋಪ ಕುರಿತು ವಿವರಣೆ ನೀಡುವಂತೆ ಮಾನವ ಹಕ್ಕುಗಳ ಆಯೋಗವು ಕೆಸಿಎಗೆ ನೋಟಿಸ್ ನೀಡಿದೆ.
ಆರೋಪಿ ಮನು ಕಳೆದ 10 ವರ್ಷಗಳಿಂದ ಕೆಸಿಎಯಲ್ಲಿ ಕೋಚ್ ಆಗಿದ್ದು, ಆತನನ್ನು ಈಗಾಗಲೇ ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆ (ಪೋಕ್ಸೊ) ಕಾಯ್ದೆಯಡಿ ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕ್ರಿಕೆಟ್ ತರಬೇತಿಗೆ ತೆರಳಿದ್ದ ವೇಳೆ ಆರೋಪಿ ಸಂತ್ರಸ್ತ ಬಾಲಕಿಯರ ನಗ್ನ ಫೋಟೊಗಳನ್ನು ತೆಗೆದಿದ್ದಾನೆ. ಬಳಿಕ ಅವರನ್ನು ಬೆದರಿಸಿ ಕಿರುಕುಳ ನೀಡಿದ್ದಾನೆ. ಘಟನೆ ಬಳಿಕ ಸಂತ್ರಸ್ತ ಬಾಲಕಿಯರು ಮತ್ತು ಅವರ ಪೋಷಕರು ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದರು. ಕೆಲ ದಿನಗಳ ಬಳಿಕ ಸಂತ್ರಸ್ತೆಯೊಬ್ಬರು ದೂರು ನೀಡಿದ ಬೆನ್ನಲ್ಲೇ ಹಲವರು ಕೋಚ್ ವಿರುದ್ಧ ಪೊಲೀಸರಿಗೆ ದೂರು ನೀಡಿದ್ದಾರೆ ಎಂದು ಮಾನವ ಹಕ್ಕುಗಳ ಆಯೋಗ ವಿವರಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.