ADVERTISEMENT

ಕೇರಳ | ವಿಲಾಸಿ ಕಾರಿಗೆ ಮಗನ ಪಟ್ಟು; ಕಬ್ಬಿಣದ ಸರಳಿನಿಂದ ಅಪ್ಪನ ಪೆಟ್ಟು

ಪಿಟಿಐ
Published 10 ಅಕ್ಟೋಬರ್ 2025, 6:56 IST
Last Updated 10 ಅಕ್ಟೋಬರ್ 2025, 6:56 IST
<div class="paragraphs"><p>ಕಾಲ್ಪನಿಕ ಚಿತ್ರ</p></div>

ಕಾಲ್ಪನಿಕ ಚಿತ್ರ

   

ಚಟ್‌ಜಿಪಿಟಿ ಎಐ ಚಿತ್ರ

ತಿರುವನಂತಪುರ: ವಿಲಾಸಿ ಕಾರಿಗೆ ಪಟ್ಟು ಹಿಡಿದ ಮಗನ ಹಠ ವಿಕೋಕ್ಕೆ ತಿರುಗಿದ ಪರಿಣಾಮ ಕಬ್ಬಿಣದ ಸರಳಿನಿಂದ ತಂದೆ ಹಲ್ಲೆ ನಡೆಸಿ ಗಾಯಗೊಳಿಸಿದ ಪ್ರಕರಣ ಕೇರಳದ ವಂಚಿಯೂರ್‌ನಲ್ಲಿ ಗುರುವಾರ ನಡೆದಿದೆ.

ADVERTISEMENT

ತಂದೆಯ ದಾಳಿಗೆ ಒಳಗಾದ 28 ವರ್ಷದ ಮಗನ ತಲೆಗೆ ಗಂಭೀರವಾಗಿ ಗಾಯವಾಗಿದೆ. ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಯುವಕನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.

ಭಾರತೀಯ ನ್ಯಾಯ ಸಂಹಿತಾ ಅಡಿಯಲ್ಲಿ ತಂದೆಯ ವಿರುದ್ಧ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಳ್ಳಲಾಗಿದ್ದು, ಪರಾರಿಯಾಗಿರುವ ಆರೋಪಿಗಾಗಿ ಹುಡುಕಾಟ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ತಂದೆಯು ಮಗನ ಬೇಡಿಕೆಯಂತೆ ಇತ್ತೀಚೆಗೆ ವಿಲಾಸಿ ಬೈಕ್‌ ಕೊಡಿಸಿದ್ದರು. ಆದರೆ ಅದರಿಂದಲೂ ತೃಪ್ತಿಯಾಗ ಯುವಕ, ವಿಲಾಸಿ ಕಾರಿಗೆ ಬೇಡಿಕೆ ಇಟ್ಟಿದ್ದ. ಈ ವಿಷಯವಾಗಿ ಇಬ್ಬರ ನಡುವೆ ಗುರುವಾರ ತೀವ್ರ ವಾಗ್ವಾದ ನಡೆದಿತ್ತು. ಈ ಸಂದರ್ಭದಲ್ಲಿ ತಂದೆಯ ಮೇಲೆ ಮಗ ದಾಳಿ ಮಾಡಿದ್ದ. ಇದರಿಂದ ತಪ್ಪಿಸಿಕೊಳ್ಳಲು ಯತ್ನಿಸಿ, ಕೈಗೆ ಸಿಕ್ಕ ಕಬ್ಬಿಣದ ಸರಳಿನಿಂದ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಯುವಕ ನಿರುದ್ಯೋಗಿಯಾಗಿದ್ದ. ಆದರೆ ಸದಾ ವಿಲಾಸಿ ವಸ್ತುಗಳಿಗೆ ಮನೆಯಲ್ಲಿ ಬೇಡಿಕೆ ಇಡುತ್ತಿದ್ದ. ಅದು ಸಿಗದಿದ್ದಾಗ ತಕ್ಷಣ ಕೋಪಗೊಳ್ಳುತ್ತಿದ್ದ ಎಂದು ಅವರ ಸಂಬಂಧಿಕರು ಹಾಗೂ ಅಕ್ಕಪಕ್ಕದವರು ತಿಳಿಸಿರುವುದಾಗಿ ಪೊಲೀಸರು ಹೇಳಿದ್ದಾರೆ.

‘ಮಗನ ಮೇಲೆ ಹಲ್ಲೆ ಮಾಡಿದ ವ್ಯಕ್ತಿಯ ಮೊಬೈಲ್ ಸ್ವಿಚ್‌ ಆಫ್‌ ಆಗಿದೆ. ತಲೆಮರೆಸಿಕೊಂಡಿರುವ ವ್ಯಕ್ತಿಗಾಗಿ ಶೋಧ ಕಾರ್ಯ ಮುಂದುವರಿದಿದೆ’ ಎಂದು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.