ADVERTISEMENT

ಲಕ್ಷದ್ವೀಪ: ಆಡಳಿತಾತ್ಮಕ ಸುಧಾರಣೆ ಪ್ರಶ್ನಿಸಿದ್ದ ಅರ್ಜಿ ವಜಾ

ಪಿಟಿಐ
Published 17 ಸೆಪ್ಟೆಂಬರ್ 2021, 12:58 IST
Last Updated 17 ಸೆಪ್ಟೆಂಬರ್ 2021, 12:58 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಕೊಚ್ಚಿ: ಲಕ್ಷದ್ವೀಪದಲ್ಲಿ ಆಡಳಿತಾತ್ಮಕ ಸುಧಾರಣೆ ಕ್ರಮಗಳನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ಕೇರಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್‌, ನ್ಯಾಯಮೂರ್ತಿ ಶಾಜಿ ಪಿ.ಚಾಲಿ ಅವರಿದ್ದ ಪೀಠ ಶುಕ್ರವಾರ ವಜಾ ಮಾಡಿತು.

ಸೇವ್ ಲಕ್ಷದ್ವೀಪ್‌ ಫೋರಂ ಅರ್ಜಿ ಸಲ್ಲಿಸಿದ್ದು, ಅಲ್ಲಿನ ಡೈರಿ ಫಾರ್ಮ್‌ಗಳನ್ನು ಮುಚ್ಚುವುದು ಮತ್ತು ಶಾಲಾ ಮಕ್ಕಳ ಆಹಾರಕ್ರಮದಲ್ಲಿ ಬದಲಾವಣೆ ತರುವ ತೀರ್ಮಾನವನ್ನು ಪ್ರಶ್ನಿಸಿತ್ತು.

ಈ ಮೊದಲು ಲಕ್ಷದ್ವೀಪ ನಿವಾಸಿಗಳ ಏಕತೆಗೆ ಬೆಂಬಲ ವ್ಯಕ್ತಪಡಿಸಿ ಕೇರಳ ವಿಧಾನಸಭೆಯು ನಿರ್ಣಯ ಕೈಗೊಂಡಿತ್ತು. ಲಕ್ಷದ್ವೀಪದ ಆಡಳಿತಾಧಿಕಾರಿ ಪ್ರಫುಲ್ ಖೂಡಾ ಅವರನ್ನು ವಾಪಸು ಕರೆಸಿಕೊಳ್ಳಬೇಕು ಎಂದು ಕೇಂದ್ರವನ್ನು ಒತ್ತಾಯಿಸಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.