ADVERTISEMENT

ಕೇರಳ | ಓಣಂ ಹಬ್ಬದ ಸಂದರ್ಭದಲ್ಲಿ ₹826.38 ಕೋಟಿ ಗರಿಷ್ಠ ಮದ್ಯ ಮಾರಾಟ

ಪಿಟಿಐ
Published 5 ಸೆಪ್ಟೆಂಬರ್ 2025, 10:15 IST
Last Updated 5 ಸೆಪ್ಟೆಂಬರ್ 2025, 10:15 IST
   

ತಿರುವನಂತಪುರ: ಕೇರಳ ಓಣಂ ಹಬ್ಬದ ಸಂದರ್ಭದಲ್ಲಿ ದಾಖಲೆಯ ಪ್ರಮಾಣದಲ್ಲಿ ಮದ್ಯ ಮಾರಾಟವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೇರಳ ರಾಜ್ಯ ಪಾನೀಯ ನಿಗಮದ (ಕೆಎಸ್‌ಬಿಸಿ) ಔಟ್‌ಲೆಟ್‌ಗಳಲ್ಲಿ ₹826.38 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದ್ದು, ಸಾರ್ವಕಾಲಿಕ ದಾಖಲೆಯಾಗಿದೆ ಎಂದು ವರದಿಯಾಗಿದೆ.

10 ದಿನ‌ಗಳ ಹಬ್ಬದ ಅವಧಿಯಲ್ಲಿ ( ಆಗಸ್ಟ್ 25 ರಿಂದ ಸೆಪ್ಟೆಂಬರ್ 4ರವರೆಗೆ) ₹826.38 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದೆ. ಕಳೆದ ವರ್ಷ ಈ ಹಬ್ಬದ ಅವಧಿಯಲ್ಲಿ ₹776 ಕೋಟಿಯಷ್ಟು ಮದ್ಯ ಮಾರಾಟವಾಗಿತ್ತು. ಅಂದರೆ ಶೇ 6.38ರಷ್ಟು ಏರಿಕೆ ಕಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ADVERTISEMENT

ಗುರುವಾರ, ಉತ್ರಾಡಂ ದಿನದಂದು, ಬೆವ್ಕೊ ಮಳಿಗೆಗಳಲ್ಲಿ ₹137.64 ಕೋಟಿ ಮೌಲ್ಯದ ಮದ್ಯ ಮಾರಾಟವಾಗಿದ್ದು, ಕಳೆದ ವರ್ಷ ಇದೇ ದಿನದಂದು ಮದ್ಯ ಮಾರಾಟ ₹126.01 ಕೋಟಿಗಳಷ್ಟಿತ್ತು. ಇದು ಶೇ 9.23ರಷ್ಟು ಏರಿಕೆ ಕಂಡಿದೆ ಎಂದು ತಿಳಿದು ಬಂದಿದೆ.

ಉತ್ರಾಡಂ ದಿನದಂದು ಕೊಲ್ಲಂ ಜಿಲ್ಲೆಯಲ್ಲಿ ಕರುಣಗಪ್ಪಲ್ಲಿ ಸ್ಟೋರ್‌ನಲ್ಲಿ ₹1.46 ಕೋಟಿ ಮದ್ಯ ಮಾರಾಟ ದಾಖಲಾಗಿದ್ದು, ಇದು ರಾಜ್ಯದಲ್ಲಿ ಅತಿ ಹೆಚ್ಚು ಮದ್ಯ ಮಾರಾಟವಾದ ಮಳಿಗೆ ಎಂದು ತಿಳಿದು ಬಂದಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.