ADVERTISEMENT

Watch: ಕೇರಳದಲ್ಲಿ ಎಡ–ಬಲ ಜಗ್ಗಾಟ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2021, 7:44 IST
Last Updated 16 ಮಾರ್ಚ್ 2021, 7:44 IST

ಹಲವು ವರ್ಷಗಳಿಂದ ಕೇರಳ ರಾಜಕಾರಣದಲ್ಲಿ ಎರಡು ಮೈತ್ರಿಕೂಟಗಳದ್ದೇ ಪ್ರಾಬಲ್ಯ. ಪ್ರತಿ ಐದು ವರ್ಷಕ್ಕೊಮ್ಮೆ ಆಡಳಿತಾರೂಢ ಮೈತ್ರಿಕೂಟ ಬದಲಾಗುತ್ತದೆ ಎಂಬುದು ರೂಢಿಯೇ ಆಗಿಬಿಟ್ಟಿದೆ. ಈಗ, ಸಿಪಿಎಂ ನೇತೃತ್ವದ ಎಡ ಪ್ರಜಾಸತ್ತಾತ್ಮಕ ರಂಗ ಅಥವಾ ಎಲ್‌ಡಿಎಫ್‌ ಸರ್ಕಾರ ಇದೆ. ಕಾಂಗ್ರೆಸ್‌ ನೇತೃತ್ವದ ಸಂಯುಕ್ತ ಪ್ರಜಾಸತ್ತಾತ್ಮಕ ರಂಗ ಅಥವಾ ಯುಡಿಎಫ್‌ ಅಧಿಕಾರ ಕಸಿದುಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ನಡೆಸುತ್ತಿದೆ. ದೇವರ ನಾಡಿನಲ್ಲಿ ನೆಲೆಯೂರಲು ಬಿಜೆಪಿ ಹರಸಾಹಸ ಪಡುತ್ತಿದೆ. ಹಾಗಾಗಿ, ಈ ಬಾರಿ ತ್ರಿಕೋನ ಸ್ಪರ್ಧೆ ನಡೆಯಲಿದೆಯೇ? ಈ ಬಾರಿಯೂ ಮೈತ್ರಿಕೂಟಗಳ ಪರ್ಯಾಯ ಆಡಳಿತವೇ ಮರುಕಳಿಸಲಿದೆಯೇ? ಅಥವಾ ಸಿಪಿಎಂನ ಪಿಣರಾಯಿ ವಿಜಯನ್‌ ಮುಖ್ಯಮಂತ್ರಿಯಾಗಿ ಮುಂದುವರಿಯಲಿದ್ದಾರೆಯೇ ಎಂಬುದು ಕುತೂಹಲ ಕೆರಳಿಸಿರುವ ವಿಚಾರಗಳು.

ಮತ್ತಷ್ಟು ವಿಡಿಯೊಗಳಿಗಾಗಿ: ಪ್ರಜಾವಾಣಿ ಯೂಟ್ಯೂಬ್ ಚಾನೆಲ್ ನೋಡಿ

ತಾಜಾ ಸುದ್ದಿಗಳಿಗಾಗಿ: ಪ್ರಜಾವಾಣಿ.ನೆಟ್ ನೋಡಿ

ADVERTISEMENT

ಫೇಸ್‌ಬುಕ್ನಲ್ಲಿ ಲೈಕ್ ಮಾಡಿ

ಟ್ವಿಟರ್‌ನಲ್ಲಿ ಫಾಲೋ ಮಾಡಿ

ತಾಜಾ ಸುದ್ದಿಗಳಿಗಾಗಿ ಟೆಲಿಗ್ರಾಂ ಚಾನೆಲ್‌ನಲ್ಲಿ ನೋಡಿ...

ಕ್ಷಣ ಕ್ಷಣದ ಸುದ್ದಿ ಓದಲು, ಆಕರ್ಷಕ, ಅತ್ಯಾಧುನಿಕ ವೈಶಿಷ್ಟ್ಯಗಳಿರುವ ಪ್ರಜಾವಾಣಿ ಆ್ಯಪ್ ಬಳಸಿ
https://bit.ly/PrajavaniApp

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.