ADVERTISEMENT

ಕೆಐಐಎಫ್‌ಬಿ ಮಸಾಲಾ ಬಾಂಡ್‌ ಪ್ರಕರಣ: ಕೇರಳ CM ಪಿಣರಾಯಿಗೆ ಇ.ಡಿ ಷೋಕಾಸ್‌ ನೋಟಿಸ್‌

ಪಿಟಿಐ
Published 1 ಡಿಸೆಂಬರ್ 2025, 14:27 IST
Last Updated 1 ಡಿಸೆಂಬರ್ 2025, 14:27 IST
ಪಿಣರಾಯಿ ವಿಜಯನ್
ಪಿಣರಾಯಿ ವಿಜಯನ್   

ನವದೆಹಲಿ/ತಿರುವನಂತಪುರ: ಕೆಐಐಎಫ್‌ಬಿ ಮಸಾಲಾ ಬಾಂಡ್‌ ಪ್ರಕರಣಕ್ಕೆ ಸಂಬಂಧಿಸಿ, ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್‌,  ಮಾಜಿ ಹಣಕಾಸು ಸಚಿವ ಥಾಮಸ್‌ ಐಸಾಕ್ ಮತ್ತು ಅಧಿಕಾರಿಯೊಬ್ಬರಿಗೆ ಜಾರಿ ನಿರ್ದೇಶನಾಲಯ ಷೋಕಾಸ್‌ ನೋಟಿಸ್‌ ನೀಡಿದೆ.

ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ(ಎಫ್‌ಇಎಂಎ) ಅಡಿ ಸ್ಥಾಪಿತವಾಗಿರುವ ಜಾರಿ ನಿರ್ದೇಶನಾಲಯದ ನ್ಯಾಯನಿರ್ಣಯ ಪ್ರಾಧಿಕಾರವು ನವೆಂಬರ್ 12ರಂದು ನೋಟಿಸ್‌ ಜಾರಿಗೊಳಿಸಿದೆ. 

₹466.91 ಕೋಟಿ ನಿಧಿಗೆ ಸಂಬಂಧಿಸಿ ಕೇರಳ ಮೂಲಸೌಕರ್ಯ ಹೂಡಿಕೆ ನಿಧಿ ಮಂಡಳಿ(ಕೆಐಐಎಫ್‌ಬಿ) ಮತ್ತು ಅದರ ಅಧಿಕಾರಿಗಳು ಎಫ್ಇಎಂಎ ನಿಬಂಧನೆಗಳು ಮತ್ತು ಆರ್‌ಬಿಐ ನಿರ್ದೇಶನಗಳನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಕೆಐಐಎಫ್‌ಬಿ ಅಧ್ಯಕ್ಷರೂ ಆಗಿರುವ ಪಿಣರಾಯಿ ವಿಜಯನ್‌, ಉಪಾಧ್ಯಕ್ಷರಾಗಿರುವ ಮಾಜಿ ಸಚಿವ ಐಸಾಕ್ ಮತ್ತು ಸಿಇಒ ಆಗಿರುವ ಮುಖ್ಯಮಂತ್ರಿಗಳ ಆಪ್ತ ಕಾರ್ಯದರ್ಶಿ ಅಬ್ರಹಂ ಅವರಿಗೆ ನೋಟಿಸ್‌ ನೀಡಲಾಗಿದೆ.

ADVERTISEMENT

‘ಬಾಹ್ಯ ವಾಣಿಜ್ಯ ಸಾಲ(ಇಸಿಬಿ) ಅಡಿಯಲ್ಲಿ ರೂಪಾಯಿ ಮೌಲ್ಯದ ಬಾಂಡ್‌ಗಳ ಮೂಲಕ ₹2,672.80 ಸಂಗ್ರಹಿಸಲು ಲಂಡನ್‌ ಮತ್ತು ಸಿಂಗಪುರ ವಿನಿಮಯ ಕೇಂದ್ರಗಳಲ್ಲಿ ‘ಮಸಾಲ ಬಾಂಡ್‌’ ಅನ್ನು ಕೆಐಐಎಫ್‌ಬಿ 2019ರಲ್ಲಿ ಬಿಡುಗಡೆಗೊಳಿಸಿತ್ತು’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

‘ಈ ನಿಧಿಯಲ್ಲಿ ₹466.91 ಕೋಟಿಯನ್ನು ಭೂಮಿ ಖರೀದಿಗೆ ಬಳಸುವ ಮೂಲಕ ಆರ್‌ಬಿಐ ನಿರ್ದೇಶನಗಳನ್ನು ಉಲ್ಲಂಘಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿ ಇ.ಡಿ ಜೂನ್‌ 27ರಂದು ಪ್ರಕರಣ ದಾಖಲಿಸಿಕೊಂಡಿತ್ತು. 

ಮುಖ್ಯಮಂತ್ರಿ ಸೇರಿ ಮೂವರಿಗೆ ಇ.ಡಿ ಷೋಕಾಸ್‌ ನೀಡಿರುವುದು ‘ರಾಜಕೀಯ ಆಟದ ಭಾಗವಾಗಿದ್ದು ಕೇರಳದ ಜನ ಇದನ್ನು ಅರ್ಥಮಾಡಿಕೊಳ್ಳುತ್ತಾರೆ
ಸಿಪಿಎಂ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.