ADVERTISEMENT

ಕೋಲ್ಕತ್ತ: ಹಿಂದೂ ಮುಖಂಡ ಚಿನ್ಮಯಿ ಕೃಷ್ಣದಾಸ್‌ ಬಿಡುಗಡೆಗೆ ಒತ್ತಾಯಿಸಿ ಪ್ರತಿಭಟನೆ

ಪಿಟಿಐ
Published 29 ನವೆಂಬರ್ 2024, 14:06 IST
Last Updated 29 ನವೆಂಬರ್ 2024, 14:06 IST
<div class="paragraphs"><p>ಪ್ರತಿಭಟನೆ</p></div>

ಪ್ರತಿಭಟನೆ

   

– ಪ್ರಜಾವಾಣಿ ಚಿತ್ರ

ಕೋಲ್ಕತ್ತ: ಬಾಂಗ್ಲಾದೇಶದ ಹಿಂದೂ ಮುಖಂಡ ಚಿನ್ಮಯಿ ಕೃಷ್ಣದಾಸ್‌ ಬಿಡುಗಡೆಗೆ ಒತ್ತಾಯಿಸಿ ಇಸ್ಕಾನ್‌ ಕಚೇರಿಯಲ್ಲಿ ಶುಕ್ರವಾರವೂ ಪ್ರತಿಭಟನೆ ನಡೆಯಿತು.

ADVERTISEMENT

ಇಸ್ಕಾನ್‌ ಅನುಯಾಯಿಗಳು ಕೀರ್ತನೆಗಳನ್ನು ಪಠಿಸಿ, ದಾಸ್‌ ಪರವಾಗಿ ಭಿತ್ತಿಪತ್ರಗಳನ್ನು ಪ್ರದರ್ಶಿಸಿದರು. ಬಾಂಗ್ಲಾದೇಶದಲ್ಲಿ ಧಾರ್ಮಿಕ ಅಲ್ಪಸಂಖ್ಯಾತರು, ಅದರಲ್ಲೂ ಹಿಂದೂಗಳು ಸಮಸ್ಯೆಗೆ ಸಿಲುಕಿರುವ ಬಗ್ಗೆ ಇಸ್ಕಾನ್‌ ವಕ್ತಾರ ರಾಧಾರಾಮನ್ ದಾಸ್ ಕಳವಳ ವ್ಯಕ್ತಪಡಿಸಿದರು.

ಬಾಂಗ್ಲಾದೇಶದ 17 ಕೋಟಿ ಜನಸಂಖ್ಯೆಯಲ್ಲಿ ಅಲ್ಪಸಂಖ್ಯಾತ ಹಿಂದೂಗಳು ಕೇವಲ ಶೇ 8ರಷ್ಟಿದ್ದಾರೆ. ಶೇಖ್‌ ಹಸೀನಾ ಸರ್ಕಾರ ಅಧಿಕಾರ ಕಳೆದುಕೊಂಡ ಬಳಿಕ 50 ಜಿಲ್ಲೆಗಳಲ್ಲಿ ಇವರ ಮೇಲೆ 200 ದಾಳಿಗಳು ನಡೆದಿವೆ. ದಾಸ್‌ ಅವರನ್ನು ದೇಶದ್ರೋಹದ ಪ್ರಕರಣದಲ್ಲಿ ಬಂಧಿಸಲಾಗಿದೆ. ಅವರಿಗೆ ಕೋರ್ಟ್‌ ಜಾಮೀನು ನಿರಾಕರಿಸಿದ್ದು, ಹಿಂದೂ ಸಮುದಾಯದವರು ಬಾಂಗ್ಲಾದೇಶದ ಹಲವೆಡೆ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.