ಬಂಧನ
(ಪ್ರಾತಿನಿಧಿಕ ಚಿತ್ರ)
ಕೋಲ್ಕತ್ತ: ದೀಪಾವಳಿ ಬಳಿಕದ ಆಚರಣೆಯಲ್ಲಿ ಅಶಾಂತಿ ಉಂಟು ಮಾಡುವ ನಡವಳಿಕೆ, ನಿಷೇಧಿತ ಪಟಾಕಿ ಬಳಕೆ ಸೇರಿ ಹಲವು ಕಾನೂನು ಉಲ್ಲಂಘಿಸಿದ ಆರೋಪದಲ್ಲಿ 153 ಮಂದಿಯನ್ನು ಕೋಲ್ಕತ್ತ ಪೊಲೀಸರು ಬಂಧಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.
ಬುಧವಾರ ಈ ಬಂಧನ ನಡೆದಿದ್ದು, 146 ಮಂದಿಯನ್ನು ಅಶಾಂತಿ ಸೃಷ್ಠಿಸಲು ಯತ್ನಿಸಿದ ಹಾಗೂ 6 ಮಂದಿಯನ್ನು ನಿಷೇಧಿತ ಪಟಾಕಿ ಬಳಸಿದ ಆರೋಪದಲ್ಲಿ ಬಂಧಿಸಲಾಗಿದೆ.
ಜೂಜು ಸಂಬಂಧಿತ ಪ್ರಕರಣದಲ್ಲಿ ಯಾವುದೇ ಬಂಧನ ನಡೆದಿಲ್ಲ ಎಂದು ಅಧಿಕಾರಿ ಮಾಹಿತಿ ನೀಡಿದ್ದಾರೆ. ಆ ದಿನ ಸಂಚಾರಿ ಉಲ್ಲಂಘನೆಯ 383 ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
16.95 ಕೆ.ಜಿ ನಿಷೇಧಿತ ಪಟಾಕಿ ಹಾಗೂ 14.4 ಲೀಟರ್ ಅಕ್ರಮ ಮದ್ಯವನ್ನೂ ಇದೇ ವೇಳೆ ವಶಪಡಿಸಿಕೊಳ್ಳಲಾಗಿದೆ.
ಸಂಚಾರ ನಿಯಮ ಉಲ್ಲಂಘನೆ ಪೈಕಿ ಸವಾರ ಹೆಲ್ಮೆಟ್ ರಹಿತ ಪ್ರಯಾಣ 85, ಸಹಸವಾರ ಹೆಲ್ಮೆಟ್ ರಹಿತ 37, ಅತಿಯಾದ ವೇಗದ ಚಾಲನೆ 73, ಮದ್ಯಪಾನ ಮಾಡಿ ಚಾಲನೆ 64 ಪ್ರಕರಣಗಳು ದಾಖಲಾಗಿವೆ. ಇತರ 124 ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.