ADVERTISEMENT

ಒಂದು ರಾಷ್ಟ್ರ, ಒಂದು ಚುನಾವಣೆ: ರಾಷ್ಟ್ರಪತಿಗೆ 18,626 ಪುಟಗಳ ವರದಿ ಸಲ್ಲಿಕೆ

ಪಿಟಿಐ
Published 14 ಮಾರ್ಚ್ 2024, 7:57 IST
Last Updated 14 ಮಾರ್ಚ್ 2024, 7:57 IST
   

ನವದೆಹಲಿ: ಒಂದು ರಾಷ್ಟ್ರ, ಒಂದು ಚುನಾವಣೆಗೆ ಸಂಬಂಧಿಸಿದಂತೆ ಮಾಜಿ ರಾಷ್ಟ್ರಪತಿ ರಾಮನಾಥ ಕೋವಿಂದ ನೇತೃತ್ವದ ಉನ್ನತ ಮಟ್ಟದ ಸಮಿತಿಯು 18,626 ಪುಟಗಳ ವರದಿಯನ್ನು ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗುರುವಾರ ಸಲ್ಲಿಸಿದೆ.

ಮೊದಲ ಹಂತದಲ್ಲಿ ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಿಗೆ ಚುನಾವಣೆ ನಡೆಸಬೇಕು. ಅದಾದ, 100 ದಿನಗಳಲ್ಲಿ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆಸಬೇಕು ಎಂದು ಸಮಿತಿ ಶಿಫಾರಸು ಮಾಡಿದೆ ಎಂದು ಪಿಟಿಐ ವರದಿ ಮಾಡಿದೆ.

ಕೋವಿಂದ್ ಅವರು ವರದಿ ಸಲ್ಲಿಸುವ ಸಂದರ್ಭ ಕೇಂದ್ರ ಗೃಹ ಸಚಿವ ಅಮಿತ್ ಶಾ, ಸಮಿತಿ ಸದಸ್ಯರು, ರಾಜ್ಯಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಗುಲಾಮ್ ನಬಿ ಆಜಾದ್ ಮತ್ತು ಇತರರು ಸಹ ರಾಷ್ಟ್ರಪತಿ ಭವನದಲ್ಲಿ ಹಾಜರಿದ್ದರು.

ADVERTISEMENT

2023ರ ಸೆಪ್ಟೆಂಬರ್‌ 2 ರಂದು ರಚಿಸಲಾದ ಸಮಿತಿಯು ಸಂಬಂಧಪಟ್ಟವರು, ತಜ್ಞರ ಜೊತೆ ಚರ್ಚೆ ನಡೆಸಿ 191 ದಿನಗಳಲ್ಲಿ ವಿಸ್ತೃತ ವರದಿ ಸಲ್ಲಿಸಿದೆ.

ಜೊತೆಗೆ, ಲೋಕಸಭೆ, ವಿಧಾನಸಭೆ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಒಂದೇ ಮತದಾರರ ಪಟ್ಟಿಗೂ ಸಮಿತಿ ಶಿಫಾರಸು ಮಾಡಿದೆ.

ಹಲವು ಸಾಂವಿಧಾನಿಕ ತಿದ್ದುಪಡಿಗಳಿಗೂ ಸಮಿತಿ ಶಿಫಾರಸು ಮಾಡಿದೆ. ಇವುಗಳಿಗೆ ರಾಜ್ಯಗಳ ಅನುಮೋದನೆಯ ಅಗತ್ಯವಿಲ್ಲ ಎಂದು ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.