ADVERTISEMENT

ಶಿಂದೆ ಅವಹೇಳನ: ನಿರೀಕ್ಷಣಾ ಜಾಮೀನು ಕೋರಿ ಮದ್ರಾಸ್ ಹೈಕೋರ್ಟ್‌ಗೆ ಕಾಮ್ರಾ ಅರ್ಜಿ

ಡೆಕ್ಕನ್ ಹೆರಾಲ್ಡ್
Published 28 ಮಾರ್ಚ್ 2025, 10:10 IST
Last Updated 28 ಮಾರ್ಚ್ 2025, 10:10 IST
<div class="paragraphs"><p>ಕುನಾಲ್ ಕಾಮ್ರಾ</p></div>

ಕುನಾಲ್ ಕಾಮ್ರಾ

   

(ಚಿತ್ರ ಕೃಪೆ– X/@kunalkamra88)

ಮುಂಬೈ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ಅವರ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಈ ಪ್ರಕರಣ ಸಂಬಂಧ ನಿರೀಕ್ಷಣಾ ಜಾಮೀನು ಕೋರಿ ಕಾಮ್ರಾ ಅವರು ಶುಕ್ರವಾರ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ADVERTISEMENT

ಶಿಂದೆ ವಿರುದ್ಧ ನೀಡಿದ ಹೇಳಿಕೆಗೆ ಸಂಬಂಧಿಸಿದಂತೆ ಮಾರ್ಚ್ 31ರಂದು ವಿಚಾರಣೆಗೆ ಹಾಜರಾಗುವಂತೆ ಕುನಾಲ್ ಅವರಿಗೆ ಪೊಲೀಸರು ಗುರುವಾರ ಸಮನ್ಸ್‌ ನೀಡಿದ್ದರು.

ಏನಿದು ಪ್ರಕರಣ?

ಮುಂಬೈನ ಹ್ಯಾಬಿಟ್ಯಾಟ್ ಸ್ಟುಡಿಯೊದಲ್ಲಿ ಇತ್ತೀಚೆಗೆ ನಡೆದ ಕಾರ್ಯಕ್ರಮವೊಂದರಲ್ಲಿ ‘ದಿಲ್‌ ತೊ ಪಾಗಲ್‌ ಹೈ’ ಚಿತ್ರದ ಜನಪ್ರಿಯ ಹಾಡೊಂದನ್ನು ತುಸು ಬದಲಿಸಿ ಕಾಮ್ರಾ ಅವರು, ಶಿಂದೆ ಅವರನ್ನು ಗುರಿಯಾಗಿಸಿ ‘ವಂಚಕ’ ಎಂದಿದ್ದಾರೆ ಎಂಬ ಆರೋಪವು ಮಹಾರಾಷ್ಟ್ರದಲ್ಲಿ ವಿವಾದ ಸೃಷ್ಟಿಸಿತ್ತು.

ಇದಕ್ಕೆ ಶಿವಸೇನಾ ಬೆಂಬಲಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸ್ಟುಡಿಯೊ ಮತ್ತು ಅದು ಇರುವ ಹೋಟೆಲ್ ಅನ್ನು ಧ್ವಂಸಗೊಳಿಸಿದ್ದರು.

ಶಿವಸೇನಾ ಶಾಸಕ ಮುರ್ಜಿ ಪಟೇಲ್ ಅವರ ದೂರಿನ ಮೇರೆಗೆ ಖಾರ್ ಪೊಲೀಸರು ಕಾಮ್ರಾ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.