ADVERTISEMENT

ಕಿರ್ಗಿಸ್ತಾನ್‌; ಆನ್‌ಲೈನ್‌ ಫೋರ್ನ್‌ ಮೇಲೆ ನಿಷೇಧ

ರಾಯಿಟರ್ಸ್
Published 29 ಜುಲೈ 2025, 14:38 IST
Last Updated 29 ಜುಲೈ 2025, 14:38 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬಿಷ್ಕೆಕ್‌ : ಇಂಟರ್‌ನೆಟ್‌ ಮೇಲೆ ಸರ್ಕಾರ ನಿಯಂತ್ರಣ ಹೇರುವ ಹೊಸ ಕಾನೂನಿಗೆ ಕಿರ್ಗಿಸ್ತಾನ್‌ ಅಧ್ಯಕ್ಷ ಸಾದಿರ್‌ ಜಾಪರೋವ್‌ ಸಹಿ ಹಾಕಿದ್ದಾರೆ. ಜತೆಗೆ ಅಶ್ಲೀಲ ಛಾಯಾಚಿತ್ರ ಮತ್ತು ವಿಡಿಯೊಗೆ ನಿಷೇಧ ಹೇರಿದೆ.

ಮುಸಲ್ಮಾನರೇ ಬಹುಸಂಖ್ಯಾತರಾಗಿರುವ ದೇಶದಲ್ಲಿ ನೈತಿಕ ಮೌಲ್ಯಗಳನ್ನು ಕಾಪಾಡುವ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಜಾಪರೋವ್‌ ಕಚೇರಿಯು ಪ್ರಕಟಿಸಿದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಸಾಂಸ್ಕೃತಿಕ ಸಚಿವಾಲಯದ ಅನ್ವಯ, ಅಂತರ್ಜಾಲ ಸೇವೆ ಪೂರೈಸುವವರ ಈ ವೆಬ್‌ಸೈಟ್‌ಗಳನ್ನು ನಿರ್ಬಂಧಿಸಬೇಕು, ಇಲ್ಲವಾದರೆ, ದಂಡ ವಿಧಿಸಲಾಗುತ್ತದೆ ಎಂದು ತಿಳಿಸಲಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.