ADVERTISEMENT

ಉದ್ಯೋಗಕ್ಕಾಗಿ ಭೂಮಿ ಹಗರಣ: ವಿಚಾರಣೆಗೆ ಹಾಜರಾದ ರಾಬ್ಡಿ ದೇವಿ, ತೇಜ್‌ ಪ್ರತಾಪ್‌

ಪಿಟಿಐ
Published 18 ಮಾರ್ಚ್ 2025, 9:44 IST
Last Updated 18 ಮಾರ್ಚ್ 2025, 9:44 IST
<div class="paragraphs"><p>ಜಾರಿ ನಿರ್ದೇಶನಾಲಯ</p></div>

ಜಾರಿ ನಿರ್ದೇಶನಾಲಯ

   

ಪಟ್ನಾ: ಉದ್ಯೋಗಕ್ಕಾಗಿ ಭೂಮಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಮತ್ತು ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಇಂದು (ಮಂಗಳವಾರ) ಜಾರಿ ನಿರ್ದೇಶನಾಲಯ (ಇ.ಡಿ) ಮುಂದೆ ಹಾಜರಾದರು.

ಹಗರಣದ ಪ್ರಮುಖ ಆರೋಪಿಯಾಗಿರುವ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಅವರ ಪತ್ನಿಯಾಗಿರುವ ರಾಬ್ಡಿ ದೇವಿ ಇಂದು ಬೆಳಿಗ್ಗೆ 10.30ರ ಸುಮಾರಿಗೆ ಪಟ್ನಾದ ಬ್ಯಾಂಕ್‌ ರಸ್ತೆಯಲ್ಲಿರುವ ಇ.ಡಿ ಕಚೇರಿಗೆ ಹಾಜರಾದರು.

ADVERTISEMENT

ಈ ಸಂದರ್ಭದಲ್ಲಿ ಅವರ ಹಿರಿಯ ಮಗಳು, ಸಂಸದೆ ಮಿಸಾ ಭಾರ್ತಿ ಜೊತೆಗಿದ್ದರು.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಆರ್‌ಜೆಡಿ ವಕ್ತಾರ ಎಜಾಜ್ ಅಹ್ಮದ್, ‘ರಾಜ್ಯದಲ್ಲಿ ಚುನಾವಣೆ ಎದುರಿಸಬೇಕಾದ ಸಂದರ್ಭಗಳಲ್ಲಿ ಬಿಜೆಪಿ ತನ್ನ ವಿರೋಧಿಗಳ ಮೇಲೆ ಕೇಂದ್ರೀಯ ಸಂಸ್ಥೆಗಳನ್ನು ಪ್ರಯೋಗಿಸುವುದು ಈಗ ಸ್ಪಷ್ಟವಾಗಿದೆ. ನಾವು ಅದನ್ನು ಜಾರ್ಖಂಡ್‌ ಮತ್ತು ದೆಹಲಿಯಲ್ಲಿ ನೋಡಿದ್ದೇವೆ. ಈಗ ಅದು ಬಿಹಾರದಲ್ಲಿ ಕಾಣುತ್ತಿದೆ’ ಎಂದು ಆರೋಪಿಸಿದ್ದಾರೆ.

2004ರಿಂದ 2009ರವರೆಗೆ ಕೇಂದ್ರ ರೈಲ್ವೆ ಸಚಿವರಾಗಿದ್ದ ಲಾಲು ಪ್ರಸಾದ್‌ ಅವರು ಗ್ರೂಪ್‌ ಡಿ ಹುದ್ದೆಗಳಿಗೆ ನೇಮಕವಾದವರಿಂದ ಭೂಮಿಯನ್ನು ಪಡೆದುಕೊಂಡು ತಮ್ಮ ಕುಟುಂಬಸ್ಥರು ಮತ್ತು ಆಪ್ತರ ಹೆಸರುಗಳಿಗೆ ಮಾಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಲಾಲು ಪ್ರಸಾದ್‌ ಮತ್ತು ಇತರರ ವಿರುದ್ಧ ಸಿಬಿಐ ಹಾಗೂ ಇ.ಡಿ ಪ್ರಕರಣ ದಾಖಲಿಸಿಕೊಂಡಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.