ADVERTISEMENT

ಕೇರಳ: ಕಾಂಗ್ರೆಸ್‌ ನಾಯಕರಿಗೆ ಲಕ್ಷದ್ವೀಪ ಭೇಟಿಗೆ ಅನುಮತಿ ನಿರಾಕರಣೆ

ಪಿಟಿಐ
Published 4 ಜುಲೈ 2021, 7:14 IST
Last Updated 4 ಜುಲೈ 2021, 7:14 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಕೊಚ್ಚಿ: ಲಕ್ಷದ್ವೀಪ ಆಡಳಿತವು ಕೇರಳದ ಕಾಂಗ್ರೆಸ್‌ ನಾಯಕರಿಗೆ ಲಕ್ಷದ್ವೀಪಕ್ಕೆ ಭೇಟಿ ನೀಡಲು ಶನಿವಾರ ಅನುಮತಿ ನಿರಾಕರಿಸಿದೆ.

‘ಲಕ್ಷದ್ವೀಪ ಅಭಿವೃದ್ಧಿ ನಿಯಂತ್ರಣ ಪ್ರಾಧಿಕಾರವನ್ನು ವಿರೋಧಿಸಿ ಲಕ್ಷದ್ವೀಪದಲ್ಲಿ ಪ್ರತಿಭಟನೆಗಳು ನಡೆಯುತ್ತಿವೆ. ಇಂತಹ ಸಂದರ್ಭದಲ್ಲಿ ರಾಜಕೀಯ ಚಟುವಟಿಕೆಗಳು ದ್ವೀಪದ ಶಾಂತಿಯುತ ವಾತಾವರಣವನ್ನು ಹಾಳುಗೆಡವುವ ಸಾಧ್ಯತೆಗಳಿವೆ. ಹಾಗಾಗಿ ಕಾಂಗ್ರೆಸ್‌ ನಾಯಕರ ಭೇಟಿಗೆ ಅನುಮತಿ ನೀಡಲು ಸಾಧ್ಯವಿಲ್ಲ’ ಎಂದು ಹೇಳಿದೆ.

‘ಅಲ್ಲದೆ ಕಾಂಗ್ರೆಸ್‌ ನಾಯಕರೊಂದಿಗೆ ಮಾತುಕತೆ ನಡೆಸಲು ಜನರು ಗುಂಪು ಸೇರುವ ಸಾಧ್ಯತೆಗಳಿವೆ. ಇದರಿಂದ ಕೋವಿಡ್‌ ಪ್ರಸರಣ ಭೀತಿಯು ಇದೆ’ ಎಂದು ಆಡಳಿತ ತಿಳಿಸಿದೆ.

ADVERTISEMENT

ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್‌ ಎಸ್‌.ಅಸ್ಕೆರ್‌ ಆಲಿ ಅವರುಕಾಂಗ್ರೆಸ್‌ ನಾಯಕರುಗಳಾದ ಟಿ.ಎನ್‌ ಪ್ರತಾಪನ್‌, ಹಿಬಿ ಎಡೆನ್‌ ಮತ್ತು ಕಾಂಗ್ರೆಸ್‌ನ ಮೀನುಗಾರಿಕೆ ಘಟಕದ ರಾಷ್ಟ್ರೀಯ ಕಾನೂನು ಸಲಹೆಗಾರ ಸಿ.ಆರ್‌ ರಾಕೇಶ್‌ ಶರ್ಮಾ ಅವರಿಗೆ ಲಕ್ಷದ್ವೀಪಕ್ಕೆ ಭೇಟಿ ನೀಡಲು ಅನುಮತಿ ನಿರಾಕರಿಸಿದ್ದಾರೆ.

‘ಸ್ಥಳೀಯ ಕಾರ್ಯಕರ್ತರು, ರಾಜಕೀಯ ನಾಯಕರು, ಸಾಮಾಜಿಕ ಕಾರ್ಯಕರ್ತರು ಮತ್ತು ನಾಗರಿಕರನ್ನು ಆಡಳಿದ ಎಲ್ಲಾ ಕ್ರಮಗಳನ್ನು ವಿರೋಧಿಸುವಂತೆ ಕೇರಳದ ನಾಯಕರು ಉತ್ತೇಜಿಸುತ್ತಿದ್ದಾರೆ. ಹಾಗಾಗಿ ಲಕ್ಷದ್ವೀಪಕ್ಕೆ ಕೇರಳದ ನಾಯಕರ ಭೇಟಿಯು ದ್ವೀಪದಲ್ಲಿ ಅಶಾಂತಿ ಸೃಷ್ಟಿಸುವ ಸಾಧ್ಯತೆಗಳಿವೆ’ ಎಂದು ಅಲ್ಲಿನ ಪೊಲೀಸರು ವರದಿ ಸಲ್ಲಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.