ADVERTISEMENT

ಮೋದಿ ಮತ್ತೊಮ್ಮೆ ಅಧಿಕಾರಕ್ಕೇರಿದರೆ ಅದಕ್ಕೆ ರಾಹುಲ್ ಹೊಣೆ: ಕೇಜ್ರಿವಾಲ್ 

​ಪ್ರಜಾವಾಣಿ ವಾರ್ತೆ
Published 25 ಏಪ್ರಿಲ್ 2019, 9:47 IST
Last Updated 25 ಏಪ್ರಿಲ್ 2019, 9:47 IST
   

ದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಗುರುವಾರ ಆಮ್ ಆದ್ಮಿಪಕ್ಷದ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ.ಈ ವೇಳೆ ಮಾತನಾಡಿದ ಕೇಜ್ರಿವಾಲ್2019ರ ಚುನಾವಣೆ ದೇಶದ ಟರ್ನಿಂಗ್ ಪಾಯಿಂಟ್ ಆಗಲಿದೆ. 2019ರ ಲೋಕಸಭಾ ಚುನಾವಣೆಯು ದೇಶವನ್ನು ಕಾಪಾಡಲು, ಸಂವಿಧಾನವನ್ನು ಕಾಪಾಡಲು ಇರುವುದಾಗಿದೆ.ನಾವೆಲ್ಲರೂ ಮೊದಲು ಭಾರತೀಯರು ಆನಂತರವೇ ಹಿಂದೂ ಅಥವಾ ಮುಸ್ಲಿಂ ಎಂದಿದ್ದಾರೆ.

ಬಿಜೆಪಿಯನ್ನು ಪರಾಭವಗೊಳಿಸಿ ಮೋದಿಯನ್ನು ಪ್ರಧಾನಿ ಸ್ಥಾನದಿಂದ ಮತ್ತು ಅಮಿತ್ ಶಾ ಅವರನ್ನು ಬಿಜೆಪಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸುವುದೇ ಆಮ್ ಆದ್ಮಿ ಪಕ್ಷದ ಮುಖ್ಯ ಉದ್ದೇಶ.ಮೋದಿ-ಶಾ ಜೋಡಿಯನ್ನು ಪರಾಭವಗೊಳಿಸಲುನಾವು ಏನು ಬೇಕಾದರೂ ಮಾಡುತ್ತೇವೆ. ಯಾವುದೇ ಮಹಾಮೈತ್ರಿಗೂ ನಮ್ಮ ಬೆಂಬಲ ಇರುತ್ತದೆ. ಬಿಜೆಪಿ ಅಲ್ಪ ಸಂಖ್ಯಾತರ ವಿರುದ್ಧವಾಗಿದೆ ಎಂದು ಕೇಜ್ರಿವಾಲ್ ಹೇಳಿದ್ದಾರೆ.

ಅದೇ ವೇಳೆ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧವೂ ವಾಗ್ದಾಳಿ ನಡೆಸಿದ ಅವರು ಮೈತ್ರಿ ರೂಪಿಸಲು ರಾಹುಲ್ ವಿಫಲರಾಗಿದ್ದಾರೆ. ಟ್ವಿಟರ್‌ನಲ್ಲಿ ಯಾವ ಮೈತ್ರಿ ರಚನೆಯಾಗಿತ್ತು ಎಂದು ನಾನು ರಾಹುಲ್ ಗಾಂಧಿಯಲ್ಲಿ ಕೇಳಲುಬಯಸುತ್ತೇನೆ.ಮೋದಿ ಮತ್ತು ಅಮಿತ್ ಶಾ ಮತ್ತೊಮ್ಮೆ ಅಧಿಕಾರಕ್ಕೆ ಬಂದರೆ ಅದಕ್ಕೆ ರಾಹುಲ್ ಗಾಂಧಿ ಒಬ್ಬರೇ ಹೊಣೆಯಾಗಿರುತ್ತಾರೆ.

ADVERTISEMENT

ಆಮ್ ಆದ್ಮಿ ಪಕ್ಷ ಮೈತ್ರಿ ಮಾಡಲು ಇಚ್ಛಿಸಿದರೂಕಾಂಗ್ರೆಸ್ ಅದನ್ನು ಗಂಭೀರವಾಗಿ ಪರಿಗಣಿಸಲೇ ಇಲ್ಲ ಎಂದಿದ್ದಾರೆ ದೆಹಲಿ ಸಿಎಂ.

ಕಳೆದ ವಾರವಿಡೀ ಮೈತ್ರಿ ಬಗ್ಗೆ ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಚರ್ಚೆ ನಡೆಸಿತ್ತು. ಆದರೆ ದೆಹಲಿಯ ಹೊರಗೂ ಮೈತ್ರಿ ಬೇಕು ಎಂದು ಎಎಪಿ ಬೇಡಿಕೆಯೊಡ್ಡಿದ್ದರಿಂದ ಕೊನೆಯ ಕ್ಷಣದಲ್ಲಿ ಮೈತ್ರಿ ಬೇಡ ಎಂದು ಕಾಂಗ್ರೆಸ್ ಹೇಳಿತ್ತು.

ದೆಹಲಿಗೆ ರಾಜ್ಯದ ಸ್ಥಾನಮಾನ ನೀಡುತ್ತೇವೆ ಎಂಬ ಭರವಸೆಯನ್ನು ಎಎಪಿ ನೀಡಿದ್ದು,ರಾಜ್ಯ ಸ್ಥಾನಮಾನ ಸಿಗುವುದಕ್ಕಾಗಿ ನಾವು ಹೋರಾಟ ಮುಂದುವರಿಸುತ್ತೇವೆ ಎಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.