ADVERTISEMENT

ಕುಡಿಯಲು ಹಣ ಕೊಡದ ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದವನಿಗೆ ಜೀವಾವಧಿ ಶಿಕ್ಷೆ

ಪಿಟಿಐ
Published 10 ಸೆಪ್ಟೆಂಬರ್ 2025, 10:53 IST
Last Updated 10 ಸೆಪ್ಟೆಂಬರ್ 2025, 10:53 IST
   

ಗೊಂಡಾ (ಉತ್ತರ ಪ್ರದೇಶ): ಮದ್ಯಪಾನಕ್ಕೆ ಹಣ ನೀಡಿಲ್ಲವೆಂದು ತಂದೆಯನ್ನು ಕೊಡಲಿಯಿಂದ ಕೊಚ್ಚಿ ಕೊಂದವನಿಗೆ ಸ್ಥಳೀಯ ನ್ಯಾಯಾಲಯವೊಂದು ಕಠಿಣ ಜೀವಾವಧಿ ಶಿಕ್ಷೆ ವಿಧಿಸಿದೆ.‘

ಪ್ರಕರಣದಲ್ಲಿ ಸುಖಯ್ ಅವರನ್ನು ದೋಷಿ ಎಂದು ಘೋಷಿಸಿದ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ (III) ರಾಜೇಶ್ ಕುಮಾರ್, ಕಠಿಣ ಜೀವಾವಧಿ ಶಿಕ್ಷೆಯ ಜೊತೆಗೆ ₹ 50 ಸಾವಿರ ದಂಡವನ್ನೂ ವಿಧಿಸಿದ್ದಾರೆ.

'ಕೋತ್ವಾಲಿನ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ದತ್ತನಗರ ಬೈಸನ್ ಗ್ರಾಮದಲ್ಲಿರುವ ಸ್ವಗೃಹದಲ್ಲಿ ಈಶ್ವರ್ ದೀನ್ ಮಲಗಿದ್ದಾಗ, ‌ಸ್ವಂತ ಮಗನೇ ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ. 2021ರ ಮಾರ್ಚ್ 2ರಂದು ಘಟನೆ ನಡಿದಿದೆ' ಎಂದು ಸರ್ಕಾರಿ ವಕೀಲ ಅಮಿತ್ ಕುಮಾರ್ ಪಾಠಕ್ ತಿಳಿಸಿದ್ದಾರೆ.

ADVERTISEMENT

ಮೊದಲು ಮೃತ ಈಶ್ವರ್ ಅವರ ಸೋದರ ಸಂಬಂಧಿ, ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಿಸಿದ್ದರು. ತನಿಖೆ ವೇಳೆ ಠಾಣಾಧಿಕಾರಿ ಹಾಗೂ ತನಿಖಾಧಿಕಾರಿ ಸಾಕ್ಷ್ಯಗಳನ್ನು ಸಂಗ್ರಹಿಸಿ ಸುಖಾಯ್‌ನನ್ನು ಬಂಧಿಸಿದ್ದಾರೆ.

ಆತ ಬಾಯಿಬಿಟ್ಟ ಬಳಿಕ ಕೃತ್ಯಕ್ಕೆ ಬಳಸಲಾಗಿದ್ದ ಕೊಡಲಿಯನ್ನು ವಶಪಡಿಸಿಕೊಂಡು, ರಾಜ್ಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ವೈಜ್ಞಾನಿಕ ಪರಿಶೀಲನೆಗೆ ಕಳುಹಿಸಲಾಗಿತ್ತು ಎಂದು ಪಾಠಕ್ ತಿಳಿಸಿದ್ದಾರೆ.

ಕುಡಿತದ ದಾಸನಾಗಿದ್ದ ಸುಖಾಯ್, ಹಣಕ್ಕಾಗಿ ಪದೇ ಪದೇ ತಂದೆಯನ್ನು ಪೀಡಿಸುತ್ತಿದ್ದ. ಘಟನೆ ನಡೆದ ದಿನದಂದೂ ಹಣಕ್ಕಾಗಿ ಪೀಡಿಸಿದ್ದ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.