ADVERTISEMENT

ಸಿಂಹಿಣಿ ಸೆರೆ ಕಾರ್ಯಾಚರಣೆ ವೇಳೆ ಗುರಿತಪ್ಪಿದ ಅರಿವಳಿಕೆ; ಸಿಬ್ಬಂದಿ ಸಾವು

ಪಿಟಿಐ
Published 5 ಜನವರಿ 2026, 14:19 IST
Last Updated 5 ಜನವರಿ 2026, 14:19 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಜುನಾಗಡ, ಗುಜರಾತ್‌: ಇಲ್ಲಿನ ಅಮರೇಲಿ ಜಿಲ್ಲೆಯಲ್ಲಿ ಸಿಂಹಿಣಿಯ ರಕ್ಷಣಾ ಕಾರ್ಯಾಚರಣೆ ವೇಳೆ ಹಾರಿಸಲಾದ ಅರಿವಳಿಕೆ ಚುಚ್ಚುಮದ್ದು ತಗುಲಿ ಸಿಬ್ಬಂದಿಯೊಬ್ಬರು ಮೃತಪಟ್ಟಿದ್ದಾರೆ.

ಗಿರ್‌ ಅರಣ್ಯಕ್ಕೆ ಹೊಂದಿಕೊಂಡಿರುವ ನಾನಿ ಮೊನಿಪಾರಿ ಗ್ರಾಮದಲ್ಲಿ 4 ವರ್ಷದ ಬಾಲಕನನ್ನು ಭಾನುವಾರ ಸಿಂಹಿಣಿ ಕೊಂದುಹಾಕಿತ್ತು. ಇದಾದ ಬಳಿಕ ಅರಣ್ಯ ಇಲಾಖೆಯ ಸಿಬ್ಬಂದಿಯು ಸಿಂಹಿಣಿಯನ್ನು ಸೆರೆಹಿಡಿಯಲು ರಕ್ಷಣಾ ಕಾರ್ಯಾಚರಣೆ ಆರಂಭಿದ್ದರು.

‘ರಕ್ಷಣಾ ತಂಡವು ಹಾರಿಸಿದ ಅರಿವಳಿಕೆ ಚುಚ್ಚುಮದ್ದು ದೂರದಲ್ಲಿ ನಿಂತಿದ್ದ ಅಶ್ರಫ್‌ ಚೌಹಾಣ್‌ ಅವರಿಗೆ ತಗುಲಿದೆ. ತಕ್ಷಣವೇ ಅವರನ್ನು ವಿಸವದಾರ್‌ ಆಸ್ಪತ್ರೆಗೆ ಕರೆದೊಯ್ದು, ಅಲ್ಲಿಂದ ಜುನಾಗಡ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇ, ಸೋಮವಾರ ಬೆಳಿಗ್ಗೆ 7 ಗಂಟೆಗೆ ಮೃತಪಟ್ಟಿದ್ದಾರೆ’ ಎಂದು ಜುನಾಗಡ ವನ್ಯಜೀವಿ ವಿಭಾಗದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ರಾಮ್‌ ರತನ್‌ ನಾಲ ಅವರು ತಿಳಿಸಿದ್ದಾರೆ.

ADVERTISEMENT

‘ಮೃತ ಅಶ್ರಫ್‌ ಅಮರೇಲಿ ಜಿಲ್ಲೆಯವರಾಗಿದ್ದು, ಅರಣ್ಯ ಇಲಾಖೆಯಲ್ಲಿ ಗುತ್ತಿಗೆ ಆಧಾರದಲ್ಲಿ ಗಸ್ತು ಸಿಬ್ಬಂದಿಯಾಗಿ ಕೆಲಸ ಮಾಡುತ್ತಿದ್ದರು’ ಎಂದು ಅವರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.