ADVERTISEMENT

ಬಡ ಮುಸ್ಲೀಮರನ್ನು ತಾಲಿಬಾನಿಗಳು ಎನ್ನುವುದನ್ನು ನಿಲ್ಲಿಸಿ: ಬಿಜೆಪಿಗೆ ಒವೈಸಿ ಚಾಟಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 2 ಸೆಪ್ಟೆಂಬರ್ 2021, 17:03 IST
Last Updated 2 ಸೆಪ್ಟೆಂಬರ್ 2021, 17:03 IST
ಅಸಾದುದ್ದೀನ್‌ ಓವೈಸಿ
ಅಸಾದುದ್ದೀನ್‌ ಓವೈಸಿ   

ಹೈದರಾಬಾದ್:‌ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವುತಾಲಿಬಾನ್‌ ಬಗ್ಗೆಇಬ್ಬಗೆ ನೀತಿಯನ್ನು ಅನುಸರಿಸುತ್ತಿದೆ ಎಂದು ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಓವೈಸಿ ಆರೋಪಿಸಿದ್ದಾರೆ. ಕೇಂದ್ರವು ತಾಲಿಬಾನ್‌ ಅನ್ನು ಉಗ್ರ ಸಂಘಟನೆ ಎಂದು ಗುರುತಿಸಬೇಕು ಇಲ್ಲವೇ ಬಡ ಮುಸ್ಲೀಮರನ್ನು ತಾಲಿಬಾನಿಗಳು ಎನ್ನುವುದನ್ನು ನಿಲ್ಲಿಸಬೇಕು ಎಂದು ಒತ್ತಾಯಿಸಿದ್ದಾರೆ.

ಮಾಧ್ಯಮದವರೊಂದಿಗೆ ಮಾತನಾಡಿದ ಓವೈಸಿ, ಪ್ರಧಾನಿ ನರೇಂದ್ರ ಮೋದಿ ಸರ್ಕಾರವು ತಾಲಿಬಾನ್‌ ಉಗ್ರ ಸಂಘಟನೆಯೋ ಅಲ್ಲವೋ ಎಂಬುದನ್ನು ದೇಶಕ್ಕೆ ಹೇಳಬೇಕು. ಒಂದು ವೇಳೆ ತಾಲಿಬಾನ್‌ ಒಂದು ಉಗ್ರ ಸಂಘಟನೆ ಎಂದು ಸರ್ಕಾರ ಹೇಳಿದರೆ, ತಾಲಿಮಾನ್‌ ಮತ್ತು ಹಕ್ಕಾನಿ ಜಾಲವನ್ನುಅಕ್ರಮ ಚಟುವಟಿಕೆ(ತಡೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ಭಯೋತ್ಪಾದಕ ಪಟ್ಟಿಗೆ ಸೇರಿಸಲಾಗುತ್ತದೆಯೇ ಎಂಬುದನ್ನೂ ಸ್ಪಷ್ಟಪಡಿಸಬೇಕು. ಮೋದಿ ಸರ್ಕಾರ ತಾಲಿಬಾನ್‌ ಅನ್ನು ಉಗ್ರ ಸಂಘಟನೆಯಲ್ಲ ಎಂದು ಭಾವಿಸುವುದಾದರೆ, ಬಿಜೆಪಿ ಮತ್ತು ಅವರ ನಾಯಕರು ಎಲ್ಲರನ್ನೂ ತಾಲಿಬಾನಿಗಳು ಎನ್ನುವುದನ್ನು ನಿಲ್ಲಿಸಬೇಕುʼ ಎಂದು ಆಗ್ರಹಿಸಿದ್ದಾರೆ.

ಮುಂದುವರಿದು, ʼಇದು ಪ್ರತಿ ದಿನವೂ ನಡೆಯುತ್ತಿದೆ. ಒಬ್ಬ ಬಡ ಮುಸ್ಲೀಂ ವ್ಯಕ್ತಿ ರಸ್ತೆಯಲ್ಲಿ ತರಕಾರಿ ಮಾರುತ್ತಿದ್ದರೆ, ಅವನನ್ನು ತಾಲಿಬಾನಿ ಎನ್ನಲಾಗುತ್ತದೆ. ಯಾರಾದರೂ ರಾಜಕೀಯವಾಗಿ ಬಿಜೆಪಿಯನ್ನು ವಿರೋಧಿಸಿದರೆ, ಧರ್ಮವನ್ನು ಬದಿಗಿಟ್ಟು ತಾಲಿಬಾನಿ ಮನಸ್ಥಿತಿಯವರು ಎನ್ನಲಾಗುತ್ತದೆʼ ಎಂದು ಕಿಡಿಕಾರಿದ್ದಾರೆ.

ADVERTISEMENT

ಕತಾರ್‌ನ ಭಾರತೀಯ ರಾಯಭಾರಿ ದೀಪಕ್ ಮಿತ್ತಲ್ ಅವರು ತಾಲಿಬಾನ್‌ನ ಹಿರಿಯ ನಾಯಕ ಶೇರ್ ಮೊಹಮ್ಮದ್ ಅಬ್ಬಾಸ್ ಸ್ಟಾನೆಕ್‌ಜಾಯ್‌ನನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ಇದು ತಾಲಿಬಾನ್ ಜೊತೆ ಭಾರತ ನಡೆಸಿದ ಮೊದಲ ಅಧಿಕೃತ ಮಾತುಕತೆ ಎಂದು ವಿದೇಶಾಂಗ ಇಲಾಖೆ ಹೇಳಿತ್ತು.

ಇದನ್ನು ಉಲ್ಲೇಖಿಸಿರುವ ಓವೈಸಿ,ತಾಲಿಬಾನ್‌ ಕೋರಿಕೆಯ ಮೇರೆಗೆಅವರೊಂದಿಗೆ ಮಾತುಕತೆ ನಡೆಸಿದ್ದೇವೆ ಎಂದು ಸರ್ಕಾರ ತಿಳಿಸಿದೆ. ತಾಲಿಬಾನ್‌ ಜೊತೆ ಮಾತುಕತೆ ನಡೆಸಿದ ಸಂದರ್ಭದಲ್ಲಿ, ಹೆಲ್ಮೆಂಡ್‌ ಪ್ರಾಂತ್ಯದಲ್ಲಿ ಜೈಷ್-ಇ-ಮೊಹಮ್ಮದ್‌ ಹಾಗೂ ಖೋಸ್ಟ್‌ನಲ್ಲಿ ಲಷ್ಕರ್‌-ಇ-ತಯಬಾ ಸಕ್ರಿಯವಾಗಿದೆ ಎಂದು ತಿಳಿಸಿದ್ದೀರಾ ಎಂದು ಪ್ರಶ್ನಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.