ADVERTISEMENT

ಕಾರು ಡಿಕ್ಕಿ 6 ಸಾವು: ₹30 ಲಕ್ಷ ಪರಿಹಾರ ನೀಡಲು ಚಾಲಕ, ವಿಮಾ ಕಂಪನಿಗೆ MACT ಆದೇಶ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2025, 7:51 IST
Last Updated 29 ಆಗಸ್ಟ್ 2025, 7:51 IST
<div class="paragraphs"><p>ಚಿತ್ರ ಕೃಪೆ: ಪ್ರಾತಿನಿಧಿಕ ಚಿತ್ರ</p></div>

ಚಿತ್ರ ಕೃಪೆ: ಪ್ರಾತಿನಿಧಿಕ ಚಿತ್ರ

   

ಠಾಣೆ: 2018ರಲ್ಲಿ ಮಹಾರಾಷ್ಟ್ರದ ಠಾಣೆ ಜಿಲ್ಲೆಯಲ್ಲಿ ಕಾರು ಅಪಘಾತದಲ್ಲಿ 44 ವರ್ಷದ ವ್ಯಕ್ತಿ ಸೇರಿ ಆರು ಜನ ಮೃತ ಪಟ್ಟಿದ್ದರು. ಮೃತ ವ್ಯಕ್ತಿಯ ಕುಟುಂಬಕ್ಕೆ ₹30.34 ಲಕ್ಷ ಪರಿಹಾರವನ್ನು ನೀಡುವಂತೆ ಮೋಟಾರ್ ಅಪಘಾತ ಪರಿಹಾರ ನ್ಯಾಯಮಂಡಳಿ ಆದೇಶಿಸಿದೆ.

ಘಟನೆ ಹಿನ್ನಲೆ: 2018ರ ನವೆಂಬರ್ 17ರಂದು ಶ್ರಿರಾಮ ಮದನ್ ಪಟೋಲೆ (44) ಅವರು ಮುಂಬೈ–ನಾಸಿಕ್ ಹೆದ್ದಾರಿಯ ಕಿಂಹವ್ಲಿ ಫಟಾ ಸೇತುವೆಯ ಬಳಿ ಬಸ್ಸಿಗಾಗಿ ಕಾಯುತ್ತಿದ್ದರು. ಆ ವೇಳೆ ವೇಗವಾಗಿ ಬರುತ್ತಿದ್ದ ಕಾರೊಂದು ನಿಯಂತ್ರಣ ತಪ್ಪಿ ಅಲ್ಲಿ ನಿಂತಿದ್ದ ಜನರಿಗೆ ಗುದ್ದಿತ್ತು. ಈ ಅಪಘಾತದಲ್ಲಿ ಪಟೋಲೆ ಸೇರಿದಂತೆ ಆರು ಮಂದಿ ಮೃತಪಟ್ಟಿದ್ದರು.

ADVERTISEMENT

ಅಪಘಾತವು ಸಂಪೂರ್ಣವಾಗಿ ಕಾರು ಚಾಲಕರ ನಿರ್ಲಕ್ಷ್ಯದಿಂದ ಆರು ಜನರು ಪ್ರಾಣ ಕಳೆದುಕೊಳ್ಳಬೇಕಾಯಿತು ಎಂದು ನ್ಯಾಯಮಂಡಳಿ ಹೇಳಿದೆ.

ಘಟನೆ ಬಳಿಕ ಪ್ರಕರಣ ದಾಖಲಾದರೂ ಒಂದು ದಿನವೂ ಕಾರು ಮಾಲೀಕ ನ್ಯಾಯಾಲಯಕ್ಕೆ ಹಾಜರಾಗದ ಕಾರಣ, ಪ್ರಕರಣವನ್ನು ಅವರ ವಿರುದ್ಧ ಏಕಪಕ್ಷೀಯವಾಗಿ ತೀರ್ಮಾನಿಸಲಾಯಿತು ನ್ಯಾಯಮಂಡಳಿ ತಿಳಿಸಿದೆ.

ಕಾರು ಮಾಲೀಕ ಜಯಂತ ದೇವೀದಾಸ್ ನರ್ಕರ್ ಮತ್ತು ವಿಮಾ ಕಂಪನಿ ಟಾಟಾ AIG ಜನರಲ್ ಇನ್ಶೂರೆನ್ಸ್ ಇಬ್ಬರೂ ಸೇರಿ ಪರಿಹಾರವನ್ನು ಪಾವತಿಸಬೇಕೆಂದು MACT ಸದಸ್ಯ ಆರ್.ವಿ. ಮೊಹಿತೆ ಅವರು ಆದೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.