ADVERTISEMENT

ಖಾತೆ ಹಂಚಿಕೆ ಮಾಡಿದ ಕಮಲನಾಥ್: ‘ಗೃಹ’ ಪ್ರವೇಶಿಸಿದ ಬಾಲಾ, ತರುಣ್ ಜೇಬಿಗೆ ಹಣಕಾಸು

ಏಜೆನ್ಸೀಸ್
Published 29 ಡಿಸೆಂಬರ್ 2018, 6:55 IST
Last Updated 29 ಡಿಸೆಂಬರ್ 2018, 6:55 IST
   

ಭೋಪಾಲ್‌:ಮಧ್ಯಪ್ರದೇಶ ಮುಖ್ಯಮಂತ್ರಿ ಕಮಲನಾಥ್‌ ಅವರು ತಮ್ಮ ಸಂಪುಟ ಸಚಿವರಿಗೆ ಶುಕ್ರವಾರ ಖಾತೆ ಹಂಚಿಕೆ ಮಾಡಿದ್ದು,ಸಾರ್ವಜನಿಕ ಸಂಪರ್ಕ, ಕೈಗಾರಿಕಾ ನೀತಿ ಮತ್ತು ಹೂಡಿಕೆ ಪ್ರಚಾರ ಇಲಾಖೆ, ಉದ್ಯೋಗ ಇಲಾಖೆಸೇರಿದಂತೆ ಇನ್ನೂ ಕೆಲವು ಖಾತೆಗಳನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದಾರೆ.

ಮಾಜಿ ಮುಖ್ಯಮಂತ್ರಿ ದಿಗ್ವಿಜಯ್‌ ಸಿಂಗ್‌ ಅವರ ಅವಧಿಯಲ್ಲಿಯೂ ಸಚಿವರಾಗಿದ್ದಬುಡಕಟ್ಟು ಸಮುದಾಯದ ನಾಯಕ ಬಾಲಾ ಬಚ್ಚನ್‌ ಅವರಿಗೆ ಗೃಹ ಮತ್ತು ಕಾರಾಗೃಹ ಖಾತೆ ನೀಡಲಾಗಿದ್ದು,ತರುಣ್‌ ಭನೋಟ್‌ಗೆಹಣಕಾಸು ಖಾತೆ ವಹಿಸಲಾಗಿದೆ ಎಂದುಅಧಿಕಾರಿಗಳು ತಿಳಿಸಿದ್ದಾರೆ.

ಹಿರಿಯ ನಾಯಕ ತುಳಸಿ ಸಿಲಾವಂತ್‌, ಪರಿಶಿಷ್ಟ ಸಮುದಾಯಕ್ಕೆ ಸೇರಿದ ಪ್ರಭುರಾಮ್‌ ಚೌಧರಿ ಹಾಗೂಗೋವಿಂದ ರಜ್‌ಪೂತ್‌ ಅವರಿಗೆ ಕ್ರಮವಾಗಿಆರೋಗ್ಯ, ಶಿಕ್ಷಣ ಹಾಗೂಕಂದಾಯ ಮತ್ತು ಸಾರಿಗೆ ಇಲಾಖೆ ಜವಾಬ್ದಾರಿ ನೀಡಲಾಗಿದೆ.

ADVERTISEMENT

ವಿಜಯಲಕ್ಷ್ಮಿ ಸಾಧೋ ಅವರಿಗೆ ಸಂಸ್ಕೃತಿ ಹಾಗೂ ವೈದ್ಯಕೀಯ ಶಿಕ್ಷಣ ಖಾತೆವಹಿಸಲಾಗಿದೆ. ಜಲಸಂಪನ್ಮೂಲ ಖಾತೆಗೆ ಹುಕುಂ ಸಿಂಗ್‌ ಕರದ, ಸಹಕಾರ ಮತ್ತು ಸಂಸದೀಯ ವ್ಯವಹಾರ ಖಾತೆಗೆ ಡಾ.ಗೋವಿಂದ್‌ ಸಿಂಗ್‌, ಲೋಕೋಪಯೋಗಿ ಇಲಾಖೆಗೆ ಸಜ್ಜನ್‌ ಸಿಂಗ್‌ ವರ್ಮಾ, ಅಲ್ಪಸಂಖ್ಯಾತ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ ಆರೀಫ್‌ ಅಕ್ವೀಲ್‌ ಅವರು ಸಚಿವರಾಗಿದ್ದಾರೆ.

ದಿಗ್ವಿಜಯ್‌ ಸಿಂಗ್‌ ಪುತ್ರಜೈವರ್ಧನ್‌ ಸಿಂಗ್‌ಗೆ ಗ್ರಾಮೀಣಾಭಿವೃದ್ಧಿ ಖಾತೆ ವಹಿಸಿಕೊಡಲಾಗಿದೆ. 33 ವಯಸ್ಸಿನ ಸಿಂಗ್‌ ಸಂಪುಟದಲ್ಲಿರುವ ಅತ್ಯಂತ ಕಿರಿಯ ಸಚಿವ ಎನಿಸಿದ್ದಾರೆ.

ರಾಜ್ಯ ಕಾಂಗ್ರೆಸ್‌ ಘಟಕದ ಮಾಜಿ ಅಧ್ಯಕ್ಷ ಅರುಣ್‌ ಯಾದವ್‌ ಅವರ ಕಿರಿಯ ಸಹೋದರಸಚಿನ್‌ ಯಾದವ್‌ಗೆ ಕೃಷಿ ಮತ್ತು ಆಹಾರ ಪೂರೈಕೆ ಮತ್ತು ಮಹಿಳಾ ಸಚಿವೆ ಇಮಾರತಿ ದೇವಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ನೀಡಲಾಗಿದೆ.ಸಂಪುಟದಲ್ಲಿರುವ ಏಕೈಕ ಪಕ್ಷೇತರ ಶಾಸಕ ಪ್ರದೀಪ್‌ ಜೈಸ್ವಾಲ್‌ಗೆಗಣಿ ಖಾತೆ ಲಭಿಸಿದೆ.

ಉಮಾಂಗ್‌ ಸಿಂಘಾರ್‌ ಅರಣ್ಯ ಸಚಿವರಾಗಿದ್ದು, ಉನ್ನತ ಶಿಕ್ಷಣ ಇಲಾಖೆ ಜೊತೆಗೆ ಕ್ರೀಡಾ ಮತ್ತು ಯುವಜನ ಸಬಲೀಕರಣ ಖಾತೆ ಜಿತು ಪಟ್ವಾರಿಗೆ ಒಲಿದಿದೆ.

ಮಧ್ಯಪ್ರದೇಶದ 18ನೇ ಮುಖ್ಯಮಂತ್ರಿಯಾಗಿ ಡಿಸೆಂಬರ್‌ 17ರಂದು ಪ್ರಮಾಣವಚನ ಸ್ವೀಕರಿಸಿದ್ದಕಮಲನಾಥ್‌, ಡಿಸೆಂಬರ್‌ 25ರಂದು ಸಂಪುಟ ವಿಸ್ತರಣೆ ಮಾಡಿದ್ದರು.ಜನವರಿ 7ರಿಂದ ವಿಧಾನಸಭೆ ಅಧಿವೇಶನ ಆರಂಭಗೊಳ್ಳಲಿದೆ.

230 ಸದಸ್ಯ ಬಲದ ವಿಧಾನಸಭೆ ಚುನಾವಣೆಯಲ್ಲಿ 114 ಸ್ಥಾನಗಳನ್ನು ಗೆದ್ದುಕೊಂಡಿದ್ದ ಕಾಂಗ್ರೆಸ್‌, ಒಂದು ಸ್ಥಾನ ಗೆದ್ದಿರುವ ಸಮಾಜವಾದಿ, 2 ಸ‌್ಥಾನ ಉಳಿಸಿಕೊಂಡಿರುವ ಬಿಎಸ್‌ಪಿ ಹಾಗೂ ಪಕ್ಷೇತರರ ಬೆಂಬಲದೊಂದಿಗೆ ಅಧಿಕಾರಕ್ಕೇರಿದೆ.

ರಾಜ್ಯದಲ್ಲಿ ಸತತ 15 ವರ್ಷಗಳಿಂದ ಆಡಳಿತದಲ್ಲಿದ್ದ ಬಿಜೆಪಿ 109 ಸ್ಥಾನ ಗಳಿಸಿತ್ತು.

ಇನ್ನಷ್ಟು ಖಾತೆಗಳ ವಿವರ

ಬ್ರಿಜೇಂದ್ರ ಸಿಂಗ್‌ ರಾಥೋರ್‌: ವಾಣಿಜ್ಯ ತೆರಿಗೆ

ಲಖನ್‌ ಸಿಂಗ್‌ ಯಾದವ್‌: ಪಶುಸಂಗೋಪನೆ

ಒಂಕಾರ್‌ ಮರ್ಕಮ್‌: ಪರಿಶಿಷ್ಟ ಪಂಗಡ ಅಭಿವೃದ್ಧಿ

ಸುಖದೇವ್‌ ಪಾನ್ಸೆ: ಸಾರ್ವಜನಿಕ ಆರೋಗ್ಯ

ಹರ್ಷ ಯಾದವ್‌:ನವೀಕರಿಸಬಹುದಾದ ಶಕ್ತಿ ಸಂಪನ್ಮೂಲ,ಗುಡಿ ಮತ್ತು ಗ್ರಾಮೀಣ ಕೈಗಾರಿಕೆ

ಕಮಲೇಶ್ವರ ಪಟೇಲ್‌: ಪಂಚಾಯತ್‌ ರಾಜ್‌ ಮತ್ತು ಗ್ರಾಮೀಣಾಭಿವೃದ್ಧಿ

ಲಖನ್‌ ಚಂಗೋರಿಯಾ: ಸಾಮಾಜಿಕ ನ್ಯಾಯ ಮತ್ತು ಪರಿಶಿಷ್ಟ ಜಾತಿ ಕಲ್ಯಾಣ

ಪಿ.ಸಿ. ಶರ್ಮಾ: ಕಾನೂನು ಮತ್ತು ಶಾಸಕಾಂಗ ವ್ಯವಹಾರ

ಸುರೇಂದ್ರ ಸಿಂಗ್‌ ಬಘೇಲ್‌: ನರ್ಮದಾ ಕಣಿವೆ ಅಭಿವೃದ್ಧಿ ಮತ್ತು ಪ್ರವಾಸೋದ್ಯಮ

ಪ್ರದ್ಯಮ್ನ ಸಿಂಗ್‌ ತೋಮರ್‌: ಆಹಾರ ಮತ್ತು ನಾಗರೀಕ ಸರಬರಾಜು

ಮಹೇಂದ್ರ ಸಿಂಗ್‌ ಸಿಸೋಡಿಯಾ: ಕಾರ್ಮಿಕ

ಪ್ರಿಯಾವ್ರಾತ್‌ ಸಿಂಗ್‌: ಇಂಧನ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.