ADVERTISEMENT

ಮಧ್ಯ ಪ್ರದೇಶ, ಮಿಜೋರಾಂ: ಮಧ್ಯಾಹ್ನ 3 ಗಂಟೆಗೆ ಶೇ.36ರಷ್ಟು ಮತದಾನ

​ಪ್ರಜಾವಾಣಿ ವಾರ್ತೆ
Published 28 ನವೆಂಬರ್ 2018, 9:26 IST
Last Updated 28 ನವೆಂಬರ್ 2018, 9:26 IST
ಮಿಜೋರಾಂನ ಮತಗಟ್ಟೆಯೊಂದರಲ್ಲಿ ಮಹಿಳೆಯೊಬ್ಬರು ಮತದಾನ ಮಾಡಲು ಆಗಮಿಸಿರುವುದು.
ಮಿಜೋರಾಂನ ಮತಗಟ್ಟೆಯೊಂದರಲ್ಲಿ ಮಹಿಳೆಯೊಬ್ಬರು ಮತದಾನ ಮಾಡಲು ಆಗಮಿಸಿರುವುದು.   

ನವದೆಹಲಿ:ಮಧ್ಯ ಪ್ರದೇಶ ಮತ್ತು ಮಿಜೋರಾಂ ರಾಜ್ಯಗಳ ವಿಧಾನಸಭೆಗಳಿಗೆ ಶಾಂತಿಯುತವಾಗಿ ಮತದಾನ ನಡೆಯುತ್ತಿದ್ದು ಮಧ್ಯಪ್ರದೇಶದಲ್ಲಿ ಮಧ್ಯಾಹ್ನ 3ಗಂಟೆ ಸುಮಾರಿಗೆ ಶೇ 36ರಷ್ಟು ಮತದಾನವಾಗಿದೆ ಎಂದು ವರದಿಯಾಗಿದೆ.

ಮಿಜೋರಾಂನಲ್ಲಿ ಮಧ್ಯಾಹ್ನ 3ಗಂಟೆ ಗಂಟೆ ವೇಳೆಗೆ ಶೇ 51ರಷ್ಟು ಮತದಾನವಾಗಿದೆ. ಮಧ್ಯ ಪ್ರದೇಶದ 230 ಸ್ಥಾನಗಳು ಹಾಗೂ ಮಿಜೋರಾಂ 40 ಸ್ಥಾನಗಳಿಗೆ ಒಂದೇ ಹಂತದಲ್ಲಿ ಮತದಾನ ನಡೆಯುತ್ತಿದೆ. ಬೆಳಗ್ಗೆ 7 ಗಂಟೆಯಿಂದ ಮತದಾನ ಆರಂಭವಾಗಿದ್ದು ಸಂಜೆ 6 ಗಂಟೆಯವರೆಗೂ ಮತದಾನ ನಡೆಯಲಿದೆ.

ಮಧ್ಯಪ್ರದೇಶದಲ್ಲಿಮೂರು ಅವಧಿಯಿಂದ ಬಿಜೆಪಿ ಸರ್ಕಾರವಿದೆ. ಇನ್ನುಮಿಜೋರಾಂನಲ್ಲಿ ಕಾಂಗ್ರೆಸ್‌ ನೇತೃತ್ವದ ಸರ್ಕಾರ ಮೂರನೇ ಅವಧಿಗೆ ಅಧಿಕಾರ ಉಳಿಸಿಕೊಳ್ಳುವ ಹವಣಿಕೆಯಲ್ಲಿದೆ.

ADVERTISEMENT

ಮಧ್ಯಪ್ರದೇಶದಲ್ಲಿ 50 ಲಕ್ಷ ಮತದಾರರು 2.899 ಅಭ್ಯರ್ಥಿಗಳ ಹಣೆಬರಹವನ್ನು ಇಂದು ಮತಪೆಟ್ಟಿಗೆ ಹಾಕಲಿದ್ದಾರೆ. ಇಲ್ಲಿ 65 ಸಾವಿರ ಮತಗಟ್ಟೆಗಳನ್ನು ತೆರೆಯಲಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ನಡುವೆ ನೇರ ಹಣಾಗಣಿ ಏರ್ಪಟಿದ್ದು ಬಿಎಸ್‌ಪಿ ಕೂಡ ಅದೃಷ್ಟ ಪರೀಕ್ಷೆಗೆ ಇಳಿದಿದೆ.

ಮಿಜೋರಾಂನಲ್ಲಿ 7 ಲಕ್ಷಕ್ಕೂ ಹೆಚ್ಚು ಮತದಾರು ಮತದಾನ ಮಾಡಲಿದ್ದಾರೆ. ಒಟ್ಟು 209 ಅಭ್ಯರ್ಥಿಗಳು ಸ್ಪರ್ಧ ಕಣದಲ್ಲಿದ್ದಾರೆ.ಈಶಾನ್ಯ ಭಾರತದಲ್ಲಿ ಕಾಂಗ್ರೆಸ್‌ ಪಕ್ಷವು ಅಧಿಕಾರದಲ್ಲಿರುವ ಏಕೈಕ ರಾಜ್ಯ ಮಿಜೋರಾಂ. ‘ಕಾಂಗ್ರೆಸ್‌ ಮುಕ್ತ ಈಶಾನ್ಯ’ ಎಂಬುದು ಇಲ್ಲಿ ಬಿಜೆಪಿಯ ಘೋಷ ವಾಕ್ಯ. ಕ್ರೈಸ್ತ ಸಮುದಾಯದ ಜನರೇ ಬಹುಸಂಖ್ಯಾತರಾಗಿರುವ ಮಿಜೋರಾಂನಲ್ಲಿ ಈವರೆಗೆ ಬಿಜೆಪಿ ವಿಧಾನಸಭೆಯ ಒಂದು ಕ್ಷೇತ್ರವ‌ನ್ನೂ ಗೆದ್ದಿಲ್ಲ. ಆದರೆ, ಈ ಬಾರಿ ಕಾಂಗ್ರೆಸ್‌ ಪಕ್ಷ ವನ್ನು ಅಧಿಕಾರದಿಂದ ಕೆಳಗಿಳಿಸಲೇಬೇಕು ಎಂಬ ಹಟದಲ್ಲಿ ಬಿಜೆಪಿ ಕೆಲಸ ಮಾಡಿದೆ.

ಮಧ್ಯ ಪ್ರದೇಶದಲ್ಲಿ 15 ವರ್ಷಗಳ ಆಡಳಿತ ವಿರೋಧಿ ಅಲೆಯ ಲಾಭ ಪಡೆದು ಬಿಜೆಪಿಯನ್ನು ಸೋಲಿಸಲು ಕಾಂಗ್ರೆಸ್‌ ಪಕ್ಷವು ಇನ್ನಿಲ್ಲದ ಪ್ರಯತ್ನ ನಡೆಸಿದೆ. ಕಾಂಗ್ರೆಸ್‌ ಮುಖಂಡರಾದ ಕಮಲನಾಥ್‌, ಜ್ಯೋತಿರಾದಿತ್ಯ ಸಿಂಧಿಯಾ ಮತ್ತು ದಿಗ್ವಿಜಯ್‌ ಸಿಂಗ್‌ ಅವರು ತಮ್ಮ ನಡುವಣ ಭಿನ್ನಾಭಿಪ್ರಾಯ ಮರೆತು ಒಗ್ಗಟ್ಟು ಪ್ರದರ್ಶಿಸಿದ್ದಾರೆ.

ಡಿಸೆಂಬರ್ 10ರಂದು ಫಲಿತಾಂಶ ಪ್ರಕಟವಾಗಲಿದೆ.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.