ADVERTISEMENT

ಮೀನುಗಳಿಗೆ ವಿಷಕಾರಿ ರಾಸಾಯನಿಕ ಲೇಪಿಸಿ ಮಾರಾಟ: ಅಧಿಕಾರಿಗಳ ದಾಳಿ

ಏಜೆನ್ಸೀಸ್
Published 29 ಫೆಬ್ರುವರಿ 2020, 5:56 IST
Last Updated 29 ಫೆಬ್ರುವರಿ 2020, 5:56 IST
ಮದುರೈ ಸಮೀಪದ ಕರಿಮೇಡು ಮೀನು ಮಾರುಕಟ್ಟೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು.
ಮದುರೈ ಸಮೀಪದ ಕರಿಮೇಡು ಮೀನು ಮಾರುಕಟ್ಟೆ ಮೇಲೆ ಅಧಿಕಾರಿಗಳು ದಾಳಿ ನಡೆಸಿದರು.   
""

ತಮಿಳುನಾಡು: ಮದುರೈ ಸಮೀಪ ಮೀನು ಮಾರುಕಟ್ಟೆ ಮೇಲೆ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು ಅಪಾಯಕಾರಿ ರಾಸಾಯನಿಕ ಸಿಂಪಡಿಸಿರುವುದು ಮೇಲ್ನೋಟಕ್ಕೆ ಕಂಡು ಬಂದ ಹಿನ್ನೆಲೆಯಲ್ಲಿ ಎರಡು ಟನ್ ತೂಕದ ಮೀನುಗಳನ್ನು ಮಾರುಕಟ್ಟೆಯಿಂದ ಹೊರ ಹಾಕಿಸಿದ್ದಾರೆ.

ಮದುರೈ ಸಮೀಪದ ಕರಿಮೇಡು ಎಂಬಲ್ಲಿ ಮೀನು ಮಾರುಕಟ್ಟೆ ಇದೆ. ಇಲ್ಲಿ ಮೀನುಗಳು ದೀರ್ಘಕಾಲ ಕೆಡದಂತೆ ಕಾಪಾಡಲು ಅಪಾಯಕಾರಿ ಫಾರ್ಮಾಲಿನ್ ರಾಸಾಯನಿಕವನ್ನು ಮೀನುಗಳಿಗೆ ಸಿಂಪಡಿಸುತ್ತಿದ್ದಾರೆ ಎಂಬ ದೂರುಗಳು ಬಂದಿದ್ದವು. ದೂರುಗಳನ್ನು ಆಧರಿಸಿ ಮದುರೈ ಆಹಾರ ಸಂರಕ್ಷಣಾಧಿಕಾರಿ ಸೋಮಸುಂದರಂ ಹಾಗೂ ಇತರೆ ಅಧಿಕಾರಿಗಳು ಶುಕ್ರವಾರ ರಾತ್ರಿ ಮಾರುಕಟ್ಟೆಯ
ಮೇಲೆ ದಾಳಿ ನಡೆಸಿದರು.

ಈ ಸಮಯದಲ್ಲಿ ಮಾರುಕಟ್ಟೆಯಲ್ಲಿರುವ ಮೀನುಗಳನ್ನು ಲ್ಯಾಬೋರೇಟರಿ ತಜ್ಞರಿಂದ ತಪಾಸಣೆ ಮಾಡಿಸಲಾಯಿತು. ಆ ಸಮಯದಲ್ಲಿ ಫಾರ್ಮಾಲಿನ್ ರಾಸಾಯನಿಕವನ್ನು ಸಿಂಪಡಿಸಿರುವುದು ಕಂಡು ಬಂತು ಎಂದು ಅರೋಗ್ಯ ಅಧಿಕಾರಿಗಳು ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.