ಗಿನ್ನಿಸ್ ವಿಶ್ವ ದಾಖಲೆ ಪ್ರಮಾಣಪತ್ರದೊಂದಿಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಇತರರು
ಚಿತ್ರಕೃಪೆ: CMOfficeUP
ಪ್ರಯಾಗ್‌ರಾಜ್: ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನಲ್ಲಿ 45 ದಿನಗಳ ಕಾಲ ನಡೆದ ಮಹಾಕುಂಭ ಮೇಳ ಹಲವು ಗಿನ್ನಿಸ್ ವಿಶ್ವ ದಾಖಲೆಗಳನ್ನು ನಿರ್ಮಿಸಿದೆ.
ಈ ಕುರಿತು ಉತ್ತರ ಪ್ರದೇಶ ಸರ್ಕಾರ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡು ಮಾಹಿತಿ ನೀಡಿದೆ.
ಈ ಮೇಳ, ಏಕಕಾಲದಲ್ಲಿ ಅತಿ ಹೆಚ್ಚು ಜನರಿಂದ ನದಿ ಶುದ್ಧೀಕರಣ, ಏಕ ಸ್ಥಳದ ಸ್ವಚ್ಛತಾ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯ ಸ್ವಯಂಸೇವಕರು ಭಾಗವಹಿಸಿರುವುದು, ಕೇವಲ ಎಂಟು ಗಂಟೆಗಳಲ್ಲಿ ಹ್ಯಾಂಡ್‌ಪ್ರಿಂಟ್ ಪೇಯಿಂಟಿಂಗ್‌ಗಳನ್ನು ರಚಿಸುವಲ್ಲಿ ಅತಿ ಹೆಚ್ಚು ಜನ ಭಾಗಿಯಾಗಿರುವ ವಿಚಾರಕ್ಕೆ ಗಿನ್ನಿಸ್ ವಿಶ್ವ ದಾಖಲೆ ನಿರ್ಮಾಣವಾಗಿದೆ.
ಒಂದೇ ಸ್ಥಳದಲ್ಲಿ ಅತಿ ಹೆಚ್ಚು ಜನ ಸೇರುವ ಮೂಲಕ ‘ವಸುದೈವ ಕುಟುಂಬಕಂ’ ಎನ್ನುವ ಸಂದೇಶವನ್ನು ಮಹಾಕುಂಭ ಜಗತ್ತಿಗೆ ಸಾರಿದೆ ಎಂದು ಸರ್ಕಾರ ಹೇಳಿದೆ.
2025ರ ಜ.13ರಿಂದ ಆರಂಭವಾದ ಮಹಾಕುಂಭ ಮೇಳ ಫೆ.26ರವರೆಗೆ ನಡೆಯಿತು. ಸರ್ಕಾರ 45 ಕೋಟಿ ಭಕ್ತರ ಆಗಮನವನ್ನು ನಿರೀಕ್ಷಿಸಿತ್ತು. ಆದರೆ ಸರ್ಕಾರದ ಅಂಕಿಅಂಶಗಳ ಪ್ರಕಾರ ಮಹಾಕುಂಭ ಮೇಳದಲ್ಲಿ 66 ಕೋಟಿ ಜನ ಭಾಗಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.