ನಾನಾ ಪಟೋಲೆ
ನಿಮ್ಮನ್ನು ನಾಯಿಗಳು ಎಂದು ಕರೆಯುವ ಬಿಜೆಪಿಗೆ ಮತ ನೀಡುತ್ತೀರಾ ಎಂದು ಅಕೋಲಾ ಜಿಲ್ಲೆಯ ಒಬಿಸಿ ಜನರಲ್ಲಿ ಕೇಳಬಯಸುತ್ತೇನೆ. ಬಿಜೆಪಿಯನ್ನು ನಾಯಿಯಂತೆ ಮಾಡುವ ಸಮಯವೀಗ ಬಂದಿದೆ..ನಾನಾ ಪಟೋಲೆ, ಮಹಾರಾಷ್ಟ್ರ ಕಾಂಗ್ರೆಸ್ ಘಟಕದ ಅಧ್ಯಕ್ಷ
ಶರದ್ ಪವಾರ್ ಅವರು ಒಂದು ಹೇಳುತ್ತಾರೆ. ಉದ್ಧವ್ ಅವರು ಚುನಾವಣಾ ಆಯೋಗವನ್ನು ನಿಂದಿಸುತ್ತಾರೆ. ಕಾಂಗ್ರೆಸ್ ಪಕ್ಷವು ಈಗ ಬಿಜೆಪಿಯನ್ನು ನಾಯಿ ಎನ್ನುತ್ತಿದೆ. ರಾಜ್ಯದಲ್ಲಿ ‘ಮಹಾಯುತಿ’ ಸರ್ಕಾರ ರಚನೆಯಾಗಲಿದೆ ಎಂದು ಹಲವು ಸಮೀಕ್ಷೆಗಳು ಹೇಳುತ್ತಿವೆ. ಈ ಕಾರಣಕ್ಕಾಗಿಯೇ ಈ ರೀತಿ ಹೇಳಿಕೆಗಳನ್ನು ನೀಡಲಾಗುತ್ತಿದೆ.ಕಿರೀಟ್ ಸೋಮಯ್ಯ, ಬಿಜೆಪಿ ಮುಖಂಡ
ಜೈರಾಮ್ ರಮೇಶ್ vs ಶೋಭಾ ಕರಂದ್ಲಾಜೆ
ಸಮಾನತೆ, ಸಮೃದ್ಧಿ ಸಾಧಿಸಲು ಜನರಿಗೆ ನ್ಯಾಯ ಒದಗಿಸಲು ಐದು ಗ್ಯಾರಂಟಿಗಳನ್ನು ಕರ್ನಾಟಕದ ಜನರ ಮುಂದಿರಿಸಿ ಚುನಾವಣೆ ಎದುರಿಸಿದ್ದೆವು. ಸರ್ಕಾರ ರಚನೆಯಾದ ಬಳಿಕ, ಕಾಂಗ್ರೆಸ್ ಸರ್ಕಾರವು ಜನರು ಭರವಸೆ ನೀಡಿದಂತೆ ಐದೂ ಗ್ಯಾರಂಟಿಗಳನ್ನು ಜಾರಿ ಮಾಡಿದೆ. 18 ತಿಂಗಳ ತನ್ನ ಅಧಿಕಾರಾವಧಿಯಲ್ಲಿ ಸರ್ಕಾರವು ಜನರಿಗೆ ಅಭೂತಪೂರ್ವ ಸಮೃದ್ಧಿಯನ್ನೂ ತಂದುಕೊಟ್ಟಿದೆಜೈರಾಮ್ ರಮೇಶ್, ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ
ನಿಧಿ ಕೊರತೆಯ ಕಾರಣ, ಕರ್ನಾಟಕದಲ್ಲಿ ಕುಟುಂಬದ ಒಬ್ಬ ಮಹಿಳೆಗೆ ಮಾತ್ರವೇ ತಿಂಗಳಿಗೆ ₹2,000 ನೀಡಲಾಗುತ್ತಿದೆ. ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಒದಗಿಸುವ ಗ್ಯಾರಂಟಿಯಿಂದಾಗಿ ರಾಜ್ಯದ ಬೊಕ್ಕಸಕ್ಕೆ ಭಾರಿ ಹೊಡೆತ ಬೀಳುತ್ತಿದೆ. ಈ ಗ್ಯಾರಂಟಿಯಿಂದಾಗಿ ಪ್ರತೀ ತಿಂಗಳು ಸುಮಾರು ₹100 ಕೋಟಿ ನಷ್ಟ ಸಂಭವಿಸುತ್ತಿದೆ. ಎಸ್‌ಸಿ, ಎಸ್‌ಟಿ ಸಮುದಾಯದಕ್ಕಾಗಿಯೇ ಇರಿಸಿದ ಅನುದಾನವನ್ನು ಇತರೆ ಹಣಕಾಸಿನ ಅಗತ್ಯಗಳಿಗಾಗಿ ಖರ್ಚು ಮಾಡಲಾಗುತ್ತಿದೆ. ಕಾಂಗ್ರೆಸ್ ಸರ್ಕಾರಗಳಿರುವ ಕರ್ನಾಟಕ ಹಾಗೂ ತೆಲಂಗಾಣದ ಅವಸ್ಥೆಯನ್ನು ನೋಡಿ ಎಚ್ಚರ ವಹಿಸಿ. ಮಹಾರಾಷ್ಟ್ರದಲ್ಲಿ ಶಕ್ತಿಯುತವಾದ ಆರ್ಥಿಕತೆ ಇದೆ.ಶೋಭಾ ಕರಂದ್ಲಾಜೆ, ಕೇಂದ್ರ ಸಚಿವೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.