ADVERTISEMENT

ಮಹಾ ರಾಜಕೀಯ | ಸುಪ್ರೀಂ ಕೋರ್ಟ್‌ ನೀಡಿದ ಆದೇಶದಲ್ಲೇನಿದೆ?

​ಪ್ರಜಾವಾಣಿ ವಾರ್ತೆ
Published 26 ನವೆಂಬರ್ 2019, 9:06 IST
Last Updated 26 ನವೆಂಬರ್ 2019, 9:06 IST
   

ನವದೆಹಲಿ: ಮಹಾರಾಷ್ಟ್ರದಲ್ಲಿ ರಚನೆಯಾಗಿದ್ದ ಫಡಣವೀಸ್‌ ನೇತೃತ್ವದ ಬಿಜೆಪಿ–ಎನ್‌ಸಿಪಿ ಸರ್ಕಾರದ ವಿರುದ್ಧ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ಮಂಗಳವಾರ ಮಹತ್ವದ ಆದೇಶ ನೀಡಿದೆ. ನಾಳೆ (ಬುಧವಾರ, ನ.27) ಬಹುಮತ ಸಾಬೀತು ಮಾಡಬೇಕು ಎಂದು ತಿಳಿಸಿದೆ.

ಆದೇಶ ನೀಡುವ ವೇಳೆ ಕೋರ್ಟ್‌ ಹೇಳಿದ ಪ್ರಮುಖ ಅಂಶಗಳು ಇಲ್ಲಿವೆ.‌

-ಈ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ನಾವು ಕಾಪಾಡಿಕೊಂಡು ಹೋಗಬೇಕು.

ADVERTISEMENT

-ನಾಳೆಯೇ... ಅಂದರೆ ಬುಧವಾರ ಸಂಜೆ 5ರ ಒಳಗೆ, ವಿಧಾನಸಭೆಯಲ್ಲಿ ಬಹುಮತ ಸಾಬೀತಾಗಲಿ

-ಒಬ್ಬ ಹಂಗಾಮಿ ಸ್ಪೀಕರ್‌ ಅನ್ನು ನೇಮಿಸಬೇಕು. ಅವರು ಕೇವಲ ವಿಶ್ವಾಸಮತ ಯಾಚನೆಗಾಗಿ ಮಾತ್ರ ಸೀಮಿತ

-ವಿಧಾನಸಭೆಯ ಹಿರಿಯ ಸದಸ್ಯರು ಹಂಗಾಮಿ ಸ್ಪೀಕರ್‌ ಆಗಬೇಕು.

-ವಿಶ್ವಾಸಮತ ಯಾಚನೆಗೂ ಮೊದಲು ಚುನಾಯಿತಿ ಸದಸ್ಯರು ಮತ್ತು ಸ್ಪೀಕರ್‌ ಅವರ ಪ್ರಮಾಣವನ ಪೂರ್ಣಗೊಳಿಸಬೇಕು ಎಂದು ರಾಜ್ಯಪಾಲರಿಗೆ ಸೂಚನೆ

-ವಿಶ್ವಾಸಮತ ಯಾಚನೆ ಪ್ರಕ್ರಿಯೆ ನೇರಪ್ರಸಾರವಾಗಬೇಕು

-ಇಡೀ ಪ್ರಕ್ರಿಯೆ ಸಂಜೆ 5ರ ಒಳಗಾಗಿ ಪೂರ್ಣಗೊಳ್ಳಬೇಕು.

-ಗುಪ್ತ ಮತದಾನಕ್ಕೆ ಅವಕಾಶವಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.