ADVERTISEMENT

ಮರಾಠಿ ಮಾತನಾಡದ್ದಕ್ಕೆ ಡಿ-ಮಾರ್ಟ್ ಸಿಬ್ಬಂದಿ ಮೇಲೆ MNS ಕಾರ್ಯಕರ್ತರಿಂದ ಹಲ್ಲೆ

ಪಿಟಿಐ
Published 26 ಮಾರ್ಚ್ 2025, 5:06 IST
Last Updated 26 ಮಾರ್ಚ್ 2025, 5:06 IST
<div class="paragraphs"><p>ಮಹಾರಾಷ್ಟ್ರದ ಅಂಧೇರಿಯ ವರ್ಸೋವಾದಲ್ಲಿರುವ ಡಿ-ಮಾರ್ಟ್ ಮಳಿಗೆ</p></div>

ಮಹಾರಾಷ್ಟ್ರದ ಅಂಧೇರಿಯ ವರ್ಸೋವಾದಲ್ಲಿರುವ ಡಿ-ಮಾರ್ಟ್ ಮಳಿಗೆ

   

Credit: dmartndia.com

ಮುಂಬೈ: ಡಿ-ಮಾರ್ಟ್ ಮಳಿಗೆಯ ಸಿಬ್ಬಂದಿಯೊಬ್ಬರು ಮರಾಠಿ ಮಾತನಾಡದ್ದಕ್ಕೆ ರಾಜ್ ಠಾಕ್ರೆ ನೇತೃತ್ವದ ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಕಾರ್ಯಕರ್ತರು ಕಪಾಳಮೋಕ್ಷ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ADVERTISEMENT

ಪಶ್ಚಿಮ ಅಂಧೇರಿಯ ವರ್ಸೋವಾದಲ್ಲಿರುವ ಡಿ-ಮಾರ್ಟ್ ಮಳಿಗೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

‘ನಾನು ಮರಾಠಿಯಲ್ಲಿ ಮಾತನಾಡುವುದಿಲ್ಲ. ಬದಲಾಗಿ ಹಿಂದಿಯಲ್ಲಿ ಮಾತ್ರ ಮಾತನಾಡುತ್ತೇನೆ. ನೀವು ಏನು ಬೇಕಾದರೂ ಮಾಡಿಕೊಳ್ಳಿ’ ಎಂದು ಡಿ-ಮಾರ್ಟ್ ಸಿಬ್ಬಂದಿಯು ಗ್ರಾಹಕರ ಜತೆ ವಾಗ್ವಾದ ನಡೆಸುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿತ್ತು.

ಈ ವಿಡಿಯೊ ವೀಕ್ಷಿಸಿದ ಬಳಿಕ ಎಂಎನ್‌ಎಸ್ ಪಕ್ಷದ ವರ್ಸೋವಾ ಘಟಕದ ಅಧ್ಯಕ್ಷ ಸಂದೇಶ್ ದೇಸಾಯಿ ನೇತೃತ್ವದ ಕಾರ್ಯಕರ್ತರ ಗುಂಪು ಡಿ-ಮಾರ್ಟ್ ನುಗ್ಗಿ ಸಿಬ್ಬಂದಿಗೆ ಕಪಾಳಮೋಕ್ಷ ಮಾಡಿದೆ ಎಂದು ಆರೋಪಿಸಲಾಗಿದೆ.

ಡಿ-ಮಾರ್ಟ್ ಸಿಬ್ಬಂದಿಗೆ ಎಂಎನ್‌ಎಸ್ ಕಾರ್ಯಕರ್ತರು ಕಪಾಳಮೋಕ್ಷ ಮಾಡಿದ್ದಾರೆ. ಬಳಿಕ ಡಿ-ಮಾರ್ಟ್ ಸಿಬ್ಬಂದಿ ಕ್ಷಮೆ ಕೋರುತ್ತಿರುವ ವಿಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.