ADVERTISEMENT

ಮಹಾರಾಷ್ಟ್ರಠಾಣೆ ಕೊಳೆಗೇರಿ ಶೌಚಾಲಯಗಳಲ್ಲಿ ‘ಪೀರಿಯಡ್‌ ರೂಂ’ ವ್ಯವಸ್ಥೆ

ಋತುಸ್ರಾವ ದಿನಗಳಲ್ಲಿ ಮಹಿಳೆಯರಿಗೆ ಆರೋಗ್ಯಕರ ಸೌಲಭ್ಯ

ಪಿಟಿಐ
Published 10 ಜನವರಿ 2021, 7:11 IST
Last Updated 10 ಜನವರಿ 2021, 7:11 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಠಾಣೆ: ಮಹಾರಾಷ್ಟ್ರದ ಠಾಣೆ ನಗರದ ಕೊಳೆಗೇರಿ ಪ್ರದೇಶಗಳಲ್ಲಿ ವಾಸಿಸುವ ಮಹಿಳೆಯರಿಗೆ ಮುಟ್ಟಿನ ದಿನಗಳಲ್ಲಿ ಆರೋಗ್ಯಕರ ಪರಿಸರ, ಸೌಲಭ್ಯಗಳನ್ನು ಒದಗಿಸುವ ಸಲುವಾಗಿ ‘ಪೀರಿಯಡ್‌ ರೂಂ’ಗಳನ್ನು ಸ್ಥಾಪಿಸಲಾಗಿದೆ.

ಈ ವಿಶಿಷ್ಟ ಶೌಚಾಲಯಗಳಲ್ಲಿ ಜೆಟ್‌ ಸ್ಪ್ರೇ, ಟಾಯ್ಲೆಟ್‌ ರೋಲ್‌ ಹೋಲ್ಡರ್‌, ಸೋಪ್‌, ಕಸದ ಬುಟ್ಟಿಯಂತಹ ಸೌಲಭ್ಯಗಳನ್ನು ಒದಗಿಸಲಾಗಿದೆ. ಸಾರ್ವಜನಿಕ ಶೌಚಾಲಯಗಳಲ್ಲಿ ಇಂಥ ಸೌಲಭ್ಯ ಆರಂಭಿಸಿರುವುದು ಇದೇ ಮೊದಲು ಎಂದು ಠಾಣೆ ಮಹಾನಗರ ಪಾಲಿಕೆ ಅಧಿಕಾರಿಗಳು ಹೇಳುತ್ತಾರೆ.

ಸ್ವಯಂಸೇವಾ ಸಂಸ್ಥೆಯೊಂದರ ನೆರವಿನೊಂದಿಗೆ ಇಲ್ಲಿನ ವಾಗ್ಲೆ ಎಸ್ಟೇಟ್‌ನ ಶಾಂತಿನಗರದಲ್ಲಿ ಸ್ಥಾಪಿಸಲಾಗಿರುವ ಈ ಶೌಚಾಲಯವನ್ನು ಕಳೆದ ಸೋಮವಾರ ಮಹಿಳೆಯರಿಗೆ ಮುಕ್ತಗೊಳಿಸಲಾಗಿದೆ ಎಂದೂ ಅಧಿಕಾರಿಗಳು ಹೇಳಿದರು.

ADVERTISEMENT

‘ಕೊಳೆಗೇರಿಯಲ್ಲಿ ವಾಸಿಸುವ ಮಹಿಳೆಯರಿಗೆ ಇಂಥ ಸೌಲಭ್ಯಗಳ ಅಗತ್ಯ ಇತ್ತು. ಒಂದು ‘ಪೀರಿಯಡ್‌ ರೂಂ’ ಸ್ಥಾಪನೆಗೆ ₹ 45,000 ವೆಚ್ಚವಾಗುತ್ತದೆ. ನಗರದಲ್ಲಿರುವ 120 ಸಾರ್ವಜನಿಕ ಶೌಚಾಲಯಗಳಲ್ಲಿ ಸಹ ಇಂಥ ವ್ಯವಸ್ಥೆಯನ್ನು ಕಲ್ಪಿಸಲಾಗುವುದು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.