ADVERTISEMENT

ಮಹಾರಾಷ್ಟ್ರ ರಾಜಕೀಯ | ಶಿವಸೇನಾಗೆ ಅಮಿತ್ ಶಾ ಮಾತು ಕೊಟ್ಟಿಲ್ಲ: ನಿತಿನ್ ಗಡ್ಕರಿ

ಏಜೆನ್ಸೀಸ್
Published 8 ನವೆಂಬರ್ 2019, 13:06 IST
Last Updated 8 ನವೆಂಬರ್ 2019, 13:06 IST
ನಿತಿನ್ ಗಡ್ಕರಿ (ಎಎನ್‌ಐ ಚಿತ್ರ)
ನಿತಿನ್ ಗಡ್ಕರಿ (ಎಎನ್‌ಐ ಚಿತ್ರ)   

ಮುಂಬೈ:ಮಹಾರಾಷ್ಟ್ರದಲ್ಲಿ 50:50 ಆಧಾರದಲ್ಲಿ ಸರ್ಕಾರ ರಚಿಸುವ ಬಗ್ಗೆ ಶಿವಸೇನಾಗೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತು ಕೊಟ್ಟಿರಲಿಲ್ಲ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.

ಸರ್ಕಾರ ರಚನೆ ಕಗ್ಗಂಟು ಬಿಗಿಯಾಗಿರುವ ಸಂದರ್ಭದಲ್ಲೇ ಆ ಕುರಿತು ಪ್ರತಿಕ್ರಿಯೆ ನೀಡಿದ ಅವರು, ‘ಇನ್ನೂ ಸಮಯವಿದೆ. ಜನರ ಕಲ್ಯಾಣಕ್ಕಾಗಿ ಬಿಜೆಪಿ–ಶಿವಸೇನಾ ಮುಂದೆ ಬಂದು ಸರ್ಕಾರ ರಚಿಸಬೇಕು’ ಎಂದು ಹೇಳಿದ್ದಾರೆ.

ಉಭಯ ಪಕ್ಷಗಳ ನಡುವಣಹಗ್ಗಜಗ್ಗಾಟ ತೀವ್ರಗೊಂಡಿರುವ ಬೆನ್ನಲ್ಲೇದೇವೇಂದ್ರ ಫಡಣವೀಸ್ ಮುಖ್ಯಮಂತ್ರಿ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.