ಅಜಿತ್ ಪವಾರ್
– ಪಿಟಿಐ ಚಿತ್ರ
ಪುಣೆ: ಲೋಕಸಭೆ ಚುನಾವಣೆಯಲ್ಲಿ ಹೀನಾಯ ಪ್ರದರ್ಶನದ ಬೆನ್ನಲ್ಲೇ, ಅಜಿತ್ ಪವಾರ್ ಬಣದ ಎನ್‌ಸಿಪಿಗೆ ಮತ್ತೊಂದು ಆಘಾತ ಉಂಟಾಗಿದೆ. ಪಿಂಪ್ರಿ–ಛಿಂಚ್ವಾಡ ಘಟಕದ ಅಧ್ಯಕ್ಷ ಅಜಿತ್ ಗೌಹಾನೆಯವರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಅವರೊಂದಿಗೆ ಇಬ್ಬರು ಮಾಜಿ ಕಾರ್ಪೊರೇಟರ್‌ಗಳು ಕೂಡ ಪಕ್ಷ ತೊರೆದಿದ್ದಾರೆ.
ಪಕ್ಷದ ಅಧ್ಯಕ್ಷ ಸುನಿಲ್ ತತ್ಕಾರೆ ಅವರಿಗೆ ಗೌಹಾನೆ ಹಾಗೂ ಇತರರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ. ‘ನಾವು ಶರದ್ ಪವಾರ್ ಅವರ ಆಶೀರ್ವಾದ ಬೇಡುತ್ತೇವೆ’ ಎಂದು ಗೌಹಾನೆ ಬುಧವಾರ ಹೇಳಿದ್ದಾರೆ.
ಇವರೆಲ್ಲರೂ ಎನ್‌ಸಿಪಿಯ ಶರದ್ ಪವಾರ್ ಬಣ ಸೇರುವ ಸಾಧ್ಯತೆ ಇದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.