ಮಹುವಾ ಮೊಯಿತ್ರಾ
(ಪಿಟಿಐ)
ನವದೆಹಲಿ: ಟಿಎಂಸಿ ಸಂಸದೆ ಮಹುವಾ ಮೊಯಿತ್ರಾ ಅವರು ಹಿರಿಯ ವಕೀಲ, ಬಿಜೆಡಿ ಪಕ್ಷದ ಮಾಜಿ ಸಂಸದ ಪಿನಾಕಿ ಮಿಶ್ರಾ ಅವರನ್ನು ಮೇ 30ರಂದು ಜರ್ಮನಿಯಲ್ಲಿ ವರಿಸಿದ್ದಾರೆ.
50 ವರ್ಷದ ಮೊಯಿತ್ರಾ ಹಾಗೂ 65 ವರ್ಷದ ಮಿಶ್ರಾ ಅವರು ತಮ್ಮ ಮದುವೆ ಬಗ್ಗೆ ಈವರೆಗೂ ಅಧಿಕೃತ ಹೇಳಿಕೆ ನೀಡಿಲ್ಲ. ಆದರೆ, ಮದುವೆ ವಸ್ತ್ರದಲ್ಲಿ ಜೋಡಿಯು ರಸ್ತೆಯೊಂದರಲ್ಲಿ ನಡೆದು ಹೋಗುತ್ತಿರುವ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಟಿಎಂಸಿ ಸಂಸದೆ ಸಯೋನಿ ಘೋಶ್ ಅವರು ತಮ್ಮ ‘ಎಕ್ಸ್’ ಖಾತೆಯಲ್ಲಿ ದಂಪತಿಗೆ ಶುಭಾಶಯ ಕೋರಿ ಪೋಸ್ಟ್ ಹಂಚಿಕೊಂಡಿದ್ದಾರೆ.
ಮೊಯಿತ್ರಾ ಅವರು ಪಶ್ಚಿಮ ಬಂಗಾಳದ ಕೃಷ್ಣಾನಗರ ಲೋಕಸಭಾ ಕ್ಷೇತ್ರದಿಂದ ಎರಡನೇ ಬಾರಿ ಸಂಸದೆಯಾಗಿ ಆಯ್ಕೆಯಾಗಿದ್ದಾರೆ. ಮಿಶ್ರಾ ಅವರು ಒಡಿಶಾದ ಪುರಿ ಲೋಕಸಭಾ ಕ್ಷೇತ್ರದಿಂದ ನಾಲ್ಕು ಬಾರಿ ಸಂಸದರಾಗಿ ಆಯ್ಕೆಯಾಗಿದ್ದರು. ಸದ್ಯ ಅವರು ಸುಪ್ರೀಂ ಕೋರ್ಟ್‌ನಲ್ಲಿ ಹಿರಿಯ ವಕೀಲರಾಗಿದ್ದಾರೆ.
ಮೊಹುವಾ ಅವರು ಡೆನ್ಮಾರ್ಕ್‌ನ ಲಾರ್ಸ್ ಬ್ರಾಸನ್ ಅವರನ್ನು ಮದುವೆಯಾಗಿದ್ದರು. ಮಿಶ್ರಾ ಅವರು ಸಂಗೀತಾ ಮಿಶ್ರಾ ಅವರನ್ನು ಮದುವೆಯಾಗಿದ್ದರು. ಈ ಇಬ್ಬರಿಗೂ ಇಬ್ಬರು ಮಕ್ಕಳಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.