ADVERTISEMENT

ಈ ದಿನದ ‍ಪ್ರಮುಖ ಸುದ್ದಿಗಳು: 29 ಜನವರಿ 2026

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಜನವರಿ 2026, 14:41 IST
Last Updated 29 ಜನವರಿ 2026, 14:41 IST
   

ರಾಹುಲ್ ಗಾಂಧಿ, ಖರ್ಗೆ ಭೇಟಿಯಾದ ಶಶಿ ತರೂರ್, ವಿಶೇಷ ದಿನಗಳಲ್ಲಿ ಪೊಲೀಸರಿಗೆ ರಜೆ ಸೇರಿ ಈ ದಿನ ಪ್ರಮುಖ ಸುದ್ದಿಗಳು ಇಲ್ಲಿವೆ

ಮಾರ್ಚ್ 5 ರಿಂದ ಗುತ್ತಿಗೆದಾರರ ಮುಷ್ಕರ: ರಾಜ್ಯದೆಲ್ಲೆಡೆ ಎಲ್ಲ ಕಾಮಗಾರಿ ಸ್ಥಗಿತ

ಬೆಂಗಳೂರು: ಬಾಕಿ ಇರುವ ₹37 ಸಾವಿರ ಕೋಟಿಯನ್ನು ಸರ್ಕಾರ ಮಾರ್ಚ್ 5 ರೊಳಗೆ ಬಿಡುಗಡೆ ಮಾಡದಿದ್ದರೆ ರಾಜ್ಯದಾದ್ಯಂತ ಎಲ್ಲ ಕಾಮಗಾರಿಗಳನ್ನು ನಿಲ್ಲಿಸಿ, ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ರಾಜ್ಯ ಗುತ್ತಿಗೆ ಸಂಘದಾರರ ಸಂಘ ನಿರ್ಧರಿಸಿದೆ.

ಗ್ರಾ.ಪಂ–ಸ್ಥಳೀಯ ಸಂಸ್ಥೆ ಚುನಾವಣೆ: ಮೀಸಲು ನಿಗದಿಗೆ ಅಂತಿಮ ಗಡುವು

 

ಬೆಂಗಳೂರು: ರಾಜ್ಯದಲ್ಲಿ ಚುನಾವಣೆ ನಡೆಯಬೇಕಿರುವ ಗ್ರಾಮ ಪಂಚಾಯಿತಿಗಳ ಸದಸ್ಯ ಸ್ಥಾನಗಳಿಗೆ ಹಾಗೂ‌ ನಗರ ಸ್ಥಳೀಯ ಸಂಸ್ಥೆಗಳಿಗೆ ವಾರ್ಡ್‌ವಾರು ಮೀಸಲಾತಿ ನಿಗದಿಪಡಿಸುವ ಸಂಬಂಧ ಉತ್ತರಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅಂತಿಮ ಗಡುವು ನೀಡಿದೆ.

ಬಾಲ ನಟ, ನಟಿ | ಜಿಲ್ಲಾಧಿಕಾರಿಯಿಂದ ಅನುಮತಿ ಕಡ್ಡಾಯ: ಕಾರ್ಮಿಕ ಇಲಾಖೆ

ಸಾಂದರ್ಭಿಕ ಚಿತ್ರ

ಮೈಸೂರು: ನಟಿಸಲು ಬಯುಸುವ ಮಕ್ಕಳು ಜಿಲ್ಲಾಧಿಕಾರಿಯಿಂದ ಅನುಮತಿ ಪತ್ರ ಪಡೆಯುವುದು ಕಡ್ಡಾಯ ಎಂದು ಕಾರ್ಮಿಕ ಇಲಾಖೆ ತಿಳಿಸಿದೆ

ಜನ್ಮದಿನಾಚರಣೆ, ವಿವಾಹ ವಾರ್ಷಿಕೋತ್ಸವ: ಪೊಲೀಸರಿಗೆ ರಜೆ ಮಂಜೂರು–ಡಿಜಿಪಿ ನಿರ್ದೇಶನ

ಬೆಂಗಳೂರು: ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳ ಜನ್ಮದಿನಾಚರಣೆ ಹಾಗೂ ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ ಮಂಜೂರು ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರು ಎಲ್ಲ ಘಟಕದ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.

ಸಂಘಪ್ಪ vs ಗಾಂಧಿ ಜಾಹೀರಾತು: ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ವಾಗ್ದಾಳಿ

ಬೆಂಗಳೂರು: ವಿಬಿ–ಜಿ ರಾಮ್‌ ಜಿ ವಿರೋಧಿಸಿ ಪತ್ರಿಕೆಗಳಲ್ಲಿ ನೀಡಿರುವ ಜಾಹೀರಾತು ವಿಚಾರವಾಗಿ ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ.

ಉ.ಪ್ರ: ಬಾಂಗ್ಲಾದೇಶದ ನಿರಾಶ್ರಿತ ಹಿಂದೂ ಕುಟುಂಬಗಳಿಗೆ ಸರ್ಕಾರದಿಂದ ಪುನರ್ವಸತಿ

ಸಾಂದರ್ಭಿಕ ಚಿತ್ರ

ಲಖನೌ: ಪೂರ್ವ ಪಾಕಿಸ್ತಾನದಿಂದ (ಈಗಿನ ಬಾಂಗ್ಲಾದೇಶ) ಸ್ಥಳಾಂತರಗೊಂಡು ರಾಜ್ಯದ ಮೇರಠ್ ಜಿಲ್ಲೆಯ ಮವಾನಾ ಎಂಬಲ್ಲಿ ಅಕ್ರಮವಾಗಿ ವಾಸ ಮಾಡುತ್ತಿರುವ 99 ಹಿಂದೂ ಕುಟುಂಬಗಳಿಗೆ ಪುನರ್ವಸತಿ ಕಲ್ಪಿಸುವ ನಿರ್ಧಾರವನ್ನು ಉತ್ತರ ಪ್ರದೇಶ ಸಚಿವ ಸಂಪುಟ ತೆಗೆದುಕೊಂಡಿದೆ ಎಂದು ಸಚಿವ ಸುರೇಶ್ ಕುಮಾರ್ ಖನ್ನಾ ತಿಳಿಸಿದ್ದಾರೆ.

ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ: ಯುಜಿಸಿ ನಿಯಮಾವಳಿಗೆ ಸುಪ್ರೀಂಕೋರ್ಟ್ ತಡೆ

ವಿದ್ಯಾರ್ಥಿಗಳ ಪ್ರತಿಭಟನೆ

ನವದೆಹಲಿ: ಉನ್ನತ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್‌ಗಳಲ್ಲಿ ಜಾತಿ ತಾರತಮ್ಯ ತಡೆಗೆ ‘ಸಮಾನತಾ ಸಮಿತಿ’ಗಳನ್ನು ರಚಿಸಲು ನಿರ್ದೇಶಿಸಿ, ರೂಪಿಸಿದ್ದ ವಿಶ್ವವಿದ್ಯಾಲಯ ಅನುದಾನ ಆಯೋಗದ (ಯುಜಿಸಿ) ಹೊಸ ನಿಯಮಗಳಿಗೆ ಸುಪ್ರೀಂ ಕೋರ್ಟ್‌ ಗುರುವಾರ ತಡೆ ನೀಡಿದೆ.

ರಾಹುಲ್‌, ಖರ್ಗೆ ಜೊತೆ ಶಶಿ ತರೂರ್‌ ಚರ್ಚೆ: ಎಲ್ಲ ಒಳ್ಳೆಯದೇ ಆಗಲಿದೆ ಎಂದ ಸಂಸದ

ರಾಹುಲ್‌, ಖರ್ಗೆ, ಶಶಿ ತರೂರ್‌

ನವದೆಹಲಿ: ಕಾಂಗ್ರೆಸ್‌ ಮುಖಂಡರೊಂದಿಗೆ ಅಂತರ ಕಾಯ್ದುಕೊಂಡಿದ್ದ ಸಂಸದ ಶಶಿ ತರೂರ್‌ ಅವರು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹಾಗೂ ಲೋಕಸಭಾ ನಾಯಕ ರಾಹುಲ್‌ ಗಾಂಧಿ ಅವರನ್ನು ಗುರುವಾರ ಭೇಟಿ ಮಾಡಿದ್ದಾರೆ.

ದೆಹಲಿ ಗಲಭೆ ಪ್ರಕರಣ: ಜಾಮೀನು ಅರ್ಜಿ ತಿರಸ್ಕಾರ

ನವದೆಹಲಿ: ದೆಹಲಿ ಗಲಭೆಯ ಪಿತೂರಿ ಪ್ರಕರಣದ ಮೂವರು ಆರೋಪಿಗಳಾದ ಸಲೀಂ ಮಲಿಕ್‌, ಅಥರ್‌ ಖಾನ್‌ ಮತ್ತು ಆಮ್ ಆದ್ಮಿ ಪಕ್ಷದ ಮಾಜಿ ಕೌನ್ಸಿಲರ್‌ ತಾಹಿರ್‌ ಹುಸೇನ್‌ ಅವರ ಜಾಮೀನು ಅರ್ಜಿಗಳನ್ನು ದೆಹಲಿ ನ್ಯಾಯಾಲಯ ಗುರುವಾರ ತಿರಸ್ಕರಿಸಿದೆ.

ಕೊಲಂಬಿಯಾ | ವಿಮಾನ ಪತನ: ಸಂಸದ ಸೇರಿ 15 ಮಂದಿ ಸಾವು

ಸಾಂದರ್ಭಿಕ ಚಿತ್ರ

ಬೊಗೋಟಾ/ಕೊಲಂಬಿಯಾ: ‌ಈಶಾನ್ಯ ಕೊಲಂಬಿಯಾದ ನಾರ್ಟೆ ಡಿ ಸ್ಯಾಂಟ್ಯಾಂಡರ್ ಪ್ರಾಂತ್ಯದಲ್ಲಿ ಬುಧವಾರ(ಜ.28) ವಿಮಾನವೊಂದು ಪತನಗೊಂಡಿದೆ. ದುರ್ಘಟನೆಯಲ್ಲಿ ಸಂಸದ ಸೇರಿದಂತೆ ವಿಮಾನದಲ್ಲಿದ್ದ ಎಲ್ಲಾ 15 ಮಂದಿ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.