ತಿರುವನಂತಪುರ: ವಿಮಾನ ದುರಂತದಲ್ಲಿ ಮೃತಪಟ್ಟವರಲ್ಲಿ ಕೇರಳದ ದಾದಿಯೊಬ್ಬರು ಸೇರಿದ್ದಾರೆ. ಪತ್ತನಂತಿಟ್ಟ ಜಿಲ್ಲೆಯ ಪುಲ್ಲಾಡ್ ನಿವಾಸಿ ರಂಜಿತಾ ಗೋಪಕುಮಾರ್ ನಾಯರ್ (40) ಮೃತರು.
ಲಂಡನ್‌ನಲ್ಲಿ ದಾದಿಯಾಗಿದ್ದ ರಂಜಿತಾ, ರಜೆ ನಿಮಿತ್ತ ಊರಿಗೆ ಬಂದಿದ್ದರು. ರಜೆ ಮುಗಿಸಿಕೊಂಡು ಬುಧವಾರ ಮರಳಿ ಲಂಡನ್‌ಗೆ ಹೋಗಲು ವಿಮಾನ ಏರಿದ್ದರು. ರಂಜಿತಾ ಅವರಿಗೆ 15 ವರ್ಷದ ಪುತ್ರ ಮತ್ತು 13 ವರ್ಷದ ಪುತ್ರಿ ಇದ್ದಾರೆ.
‘ರಂಜಿತಾ ಮೊದಲು ಕೊಲ್ಲಿ ರಾಷ್ಟ್ರದಲ್ಲಿ ದಾದಿಯಾಗಿ ಕೆಲಸ ಮಾಡಿದ್ದರು ನಂತರ ಅವರಿಗೆ ಲಂಡನ್‌ನ ಆಸ್ಪತ್ರೆಯಲ್ಲಿ ಕೆಲಸ ಲಭಿಸಿತ್ತು. ಕೇರಳದ ಪುಲ್ಲಾಡ್‌ನಲ್ಲಿ ಅವರು ಹೊಸ ಮನೆ ನಿರ್ಮಿಸುತ್ತಿದ್ದರು. ಮನೆ ನಿರ್ಮಾಣ ಕಾರ್ಯ ಅಂತಿಮ ಹಂತಕ್ಕೆ ಬಂದಿತ್ತು’ ಎಂದು ಕುಟುಂಬ ಮೂಲಗಳು ತಿಳಿಸಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.