ಕೋಲ್ಕತ್ತ: ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಇಲ್ಲಿಯ ದುರ್ಗಾ ಪೂಜಾ ಸಮಿತಿಗೆ ಥೀಮ್ ಗೀತೆ ಬರೆದಿದ್ದಾರೆ.
ಉತ್ತರ ಕೋಲ್ಕತ್ತದ ತಾಲಾ ಪಟ್ಟೋಯ್ ದುರ್ಗಾ ಪೂಜಾ ಸಮಿತಿಗೆ ಶತಮಾನ ತುಂಬಿದೆ. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಯವರು ಥೀಮ್ ಗೀತೆಯನ್ನು ರಚಿಸಿದ್ದಾರೆ. ‘ಬಿಜ್ ಅಂಗನ್’ (ಅಂಗಳದಲ್ಲಿನ ಬೀಜಗಳು) ಎನ್ನುವ ಥೀಮ್ ಇರಿಸಲಾಗಿದ್ದು, ಅದರ ಬಗ್ಗೆ ಮಮತಾ ಗೀತೆ ರಚಿಸಿದ್ದಾರೆ.
ರಾಜ್ಯ ಸಚಿವರೊಬ್ಬರು ಹಾಡಿಗೆ ದನಿಯಾಗಿದ್ದಾರೆ. ರಾಜ್ಯ ಪ್ರವಾಸೋದ್ಯಮ ಮತ್ತು ಮಾಹಿತಿ ಸಚಿವ ಇಂದ್ರಾನಿಲ್ ಸೇನ್ ಅವರು ಥೀಮ್ ಗೀತೆಯ ವಿಡಿಯೊ ಬಿಡುಗಡೆಗೊಳಿಸಿದ್ದಾರೆ.
ತಾಲಾ ಪಟ್ಟೋಯ್ ದುರ್ಗಾ ಪೂಜೆ ತನ್ನ ವಿಶೇಷತೆಗಳಿಂದ ಅನೇಕ ಪ್ರಶಸ್ತಿಗಳನ್ನು ಗೆದ್ದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.