ADVERTISEMENT

ಮಮತಾ ಬ್ಯಾನರ್ಜಿ ಅಸ್ಸಾಂಗೆ ಬಂದರೆ ನಮಗೆ ಲಾಭ: ಸಿಎಂ ಹಿಮಂತ ಬಿಸ್ವ ಶರ್ಮಾ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 29 ಆಗಸ್ಟ್ 2021, 16:35 IST
Last Updated 29 ಆಗಸ್ಟ್ 2021, 16:35 IST
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ   

ಸಿಲಿಗುರಿ:ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಜ್ಯಕ್ಕೆ ಆಗಮಿಸುವ ಸಾಧ್ಯತೆಯ ಬಗ್ಗೆ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಪ್ರತಿಕ್ರಿಯಿಸಿದ್ದಾರೆ. ಮಮತಾ ಅವರು ರಾಜ್ಯಕ್ಕೆ ಬಂದರೆ ಕೆಂಪು ಹಾಸಿನ ಸ್ವಾಗತ ಕೋರಲಾಗುವುದು. ಅವರ ಭೇಟಿಯಿಂದ ಕಾಂಗ್ರೆಸ್‌ ಮತ್ತು ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ನಡುವೆ ಮತ ವಿಭಜನೆಯಾಗಲಿದ್ದು, ಬಿಜೆಪಿಗೆ ನೆರವಾಗಲಿದೆ ಎಂದು ಹೇಳಿದ್ದಾರೆ.

ಪಶ್ಚಿಮ ಬಂಗಾಳ ಪ್ರವಾಸದಲ್ಲಿರುವ ಶರ್ಮಾ,ಇತ್ತೀಚೆಗೆ ನಿಧನರಾದ ಅಸ್ಸಾಂ ಜತಿಯಾ ಪರಿಷದ್‌ನ (ಎಜೆಪಿ) ಮಾಜಿ ಶಾಸಕ ಅಲೋಕ್‌ ಕುಮಾರ್‌ ಘೋಷ್‌ ಅವರ ನಿವಾಸಕ್ಕೆ ಭೇಟಿ ನೀಡಿದರು.

ಈ ವೇಳೆ ಸಿಲಿಗುರಿಯಲ್ಲಿ ಮಾತನಾಡಿದ ಅವರು, ʼಅಸ್ಸಾಂ ಮತ್ತು ತ್ರಿಪುರಾಗೆ ಅವರು (ಮಮತಾ) ಹೆಚ್ಚು ಸಲ ಭೇಟಿ ನೀಡಿದಷ್ಟೂ, ನಮಗೆ (ಬಿಜೆಪಿಗೆ) ಹೆಚ್ಚೆಚ್ಚು ಲಾಭವಾಗಲಿದೆ. ಅವರು ಅಸ್ಸಾಂ ಮತ್ತು ತ್ರಿಪುರಾಗೆ ಭೇಟಿ ನೀಡಿದರೆ, ಕಾಂಗ್ರೆಸ್‌ ಮತ್ತು ಟಿಎಂಸಿ ನಡುವೆ ಮತಗಳುವಿಭಜನೆಯಾಗಲಿವೆ. ಇದರಿಂದ ನಮಗೆ ಅನುಕೂಲವಾಗಲಿದೆ. ನಾನು ಅವರಿಗೆ ಕೆಂಪು ಹಾಸಿನ ಸ್ವಾಗತ ಕೋರುತ್ತೇನೆʼ ಎಂದು ಹೇಳಿದ್ದಾರೆ.

ADVERTISEMENT

ಮುಂದುವರಿದು, ʼಅಸ್ಸಾಂಗೆ ಬರಲು ಅವರಿಗೆ (ಮಮತಾ) ಸದಾ ಸ್ವಾಗತವಿದೆ; ಖಮಖಾ ದೇವಿಗೆ ಪೂಜೆ ಸಲ್ಲಿಸಲು ಅವರು ಯಾವಾಗ ಬೇಕಾದರೂ ಬರಬಹುದು. ಅವರು ದೇವರಿಗೆ ಪ್ರಾರ್ಥನೆ ಸಲ್ಲಿಸುವುದನ್ನು ಬಿಟ್ಟು ಅಸ್ಸಾಂನಲ್ಲಿ ಬೇರೇನನ್ನೂ ಮಾಡಲಾಗದು. ಮತ್ತೆ ಅವರು ಪಶ್ಚಿಮ ಬಂಗಾಳಕ್ಕೇ ಹೋಗುತ್ತಾರೆʼ ಎಂದು ವ್ಯಂಗ್ಯವಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.