ಕೋಲ್ಕತ್ತ: ‘ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಮಂಡಿಸಿದ ಬಜೆಟ್ ‘ರಾಜಕೀಯ ಪಕ್ಷಪಾತಿಯಾಗಿದ್ದು, ಬಡವರ ವಿರೋಧಿಯಾಗಿದೆ’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕಿಡಿಕಾರಿದ್ದಾರೆ.
‘ಬಜೆಟ್‌ನಲ್ಲಿ ರಾಜ್ಯವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದು, ನಾವು ಏನು ತಪ್ಪು ಮಾಡಿದ್ದೇವೆ’ ಎಂದು ಅವರು ಅಚ್ಚರಿ ವ್ಯಕ್ತಪಡಿಸಿದರು.
‘ಬಜೆಟ್‌ನಲ್ಲಿ ಬಂಗಾಳವನ್ನು ಸಂಪೂರ್ಣವಾಗಿ ಕಡೆಗಣಿಸಲಾಗಿದೆ. ಬಡವರ ಹಿತಾಸಕ್ತಿ ಕಾಪಾಡಿಲ್ಲ. ರಾಜಕೀಯ ಪಕ್ಷಪಾತಿಯಾಗಿದ್ದು, ಯಾವುದೇ ದಿಕ್ಕುದೆಸೆ, ದೂರದೃಷ್ಟಿಯಿಲ್ಲ. ರಾಜಕೀಯ ಉದ್ದೇಶ ಗುರಿ ಸಾಧಿಸಲು ಬಜೆಟ್ ಮಂಡನೆಯಾಗಿದೆ’ ಎಂದು ಇಲ್ಲಿನ ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.