ADVERTISEMENT

ಪಿಒಕೆ ವಶಪಡಿಸಿಕೊಳ್ಳುವ ಸುವರ್ಣ ಅವಕಾಶ ಕೈಚೆಲ್ಲಿದ ಕೇಂದ್ರ ಸರ್ಕಾರ: ಮಮತಾ

ಡೆಕ್ಕನ್ ಹೆರಾಲ್ಡ್
Published 11 ಜೂನ್ 2025, 4:42 IST
Last Updated 11 ಜೂನ್ 2025, 4:42 IST
   

ಕೋಲ್ಕತ್ತ: ‘ಈ ಬಾರಿ ಪಾಕ್‌ ಆಕ್ರಮಿತ ಕಾಶ್ಮೀರವನ್ನು(ಪಿಒಕೆ) ಮರಳಿ ವಶಕ್ಕೆ ಪಡೆಯುವ ಸುವರ್ಣ ಅವಕಾಶವೊಂದು ನಮ್ಮ ಮುಂದಿತ್ತು. ಆದರೆ, ಅದನ್ನು ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಕೈಚೆಲ್ಲಿತು’ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಮಂಗಳವಾರ ಸೇನಾಪಡೆಗಳ ಶೌರ್ಯ ಶ್ಲಾಘಿಸುವ ನಿರ್ಣಯವನ್ನು ಅಂಗೀಕರಿಸಿ ಮಾತನಾಡಿದ ಮಮತಾ, ನಾವು ಭಯೋತ್ಪಾದಕರ ಬೆಂಬಲಿಗರಲ್ಲ. ಭಯೋತ್ಪಾದಕರಿಗೆ ಜಾತಿ, ಧರ್ಮ ಯಾವುದು ಇಲ್ಲ ಎಂದು ಹೇಳಿದ್ದಾರೆ

‘ಪಾಕಿಸ್ತಾನಕ್ಕೆ ತಕ್ಕ ಪಾಠ ಕಲಿಸುವ ಅಗತ್ಯವಿತ್ತು. ಭಾರತೀಯ ಸೇನೆ ಕೈಗೊಂಡ ಕ್ರಮ ನಿಜಕ್ಕೂ ಶ್ಲಾಘನೀಯ. ಭಯೋತ್ಪಾದನೆಗೆ ಕ್ಷೆಮೆ ಇಲ್ಲ’ ಎಂದಿದ್ದಾರೆ.

ADVERTISEMENT

‘ಪಹಲ್ಗಾಮ್‌ ಭಯೋತ್ಪಾದಕ ದಾಳಿ ಬಗ್ಗೆ ಬಿಜೆಪಿ ನಾಯಕರು ಅಸಂಬದ್ಧ ಹೇಳಿಕೆ ನೀಡುತ್ತಿದ್ದಾರೆ. ಉಗ್ರರ ವಿರುದ್ಧ ಹೆಣ್ಣು ಮಕ್ಕಳು ಹೋರಾಡಲಿಲ್ಲ ಏಕೆ ಎಂದು ಮಧ್ಯಪ್ರದೇಶದ ಬಿಜೆಪಿ ನಾಯಕರೊಬ್ಬರು ಕೇಳಿದ್ದಾರೆ. ಅವರು ಹೇಳಿದಷ್ಟು ಅದು ಸುಲಭವಲ್ಲ. ನಮ್ಮವರ ಮೇಲೆ ಗುಂಡು ಹಾರಿಸಿ ಕೊಂದ ಉಗ್ರರನ್ನು ಇನ್ನೂ ಬಂಧಿಸಿಲ್ಲವೇಕೆ ಎಂದು ಆ ಕುಟುಂಬಗಳು ಕೇಳುತ್ತಿದ್ದಾವೆ’ ಎಂದು ಹೇಳಿದ್ದಾರೆ.

‘ಪಾಕ್‌ ಆಕ್ರಮಿತ ಕಾಶ್ಮೀರವನ್ನು ಸ್ವಾಧೀನಪಡಿಸಿಕೊಳ್ಳುವ ಸುವರ್ಣ ಅವಕಾಶವೊಂದು ನಮ್ಮ ಮುಂದೆ ಇತ್ತು. ಆ ಅವಕಾಶವನ್ನು ಕೇಂದ್ರ ಏಕೆ ಬಿಟ್ಟಿತು? ಪಹಲ್ಗಾಮ್‌ನಲ್ಲಿ ಭಯೋತ್ಪಾದಕ ದಾಳಿ ನಡೆದ ವೇಳೆ ಅಲ್ಲೊಬ್ಬ ಸೆಕ್ಯೂರಿಟಿ ಗಾರ್ಡ್‌ ಕೂಡ ಇರಲಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.