ADVERTISEMENT

ಅಪ್ರಾಪ್ತನಿಗೆ ಮೊಬೈಲ್ ಆ್ಯಪ್‌ ಡೌನ್‌ಲೋಡ್ ಮಾಡಲು ಹೇಳಿ ₹ 9 ಲಕ್ಷಕ್ಕೆ ಕನ್ನ!

ಪಿಟಿಐ
Published 9 ನವೆಂಬರ್ 2020, 2:53 IST
Last Updated 9 ನವೆಂಬರ್ 2020, 2:53 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನಾಗಪುರ: ಆನ್‌ಲೈನ್ ವಂಚನೆಯ ಪ್ರಕರಣವೊಂದರಲ್ಲಿ ಕರೆ ಮಾಡಿದ ಅಪರಿಚಿತ ವ್ಯಕ್ತಿ ನಾಗಪುರ ಸಮೀಪದ ನಿವಾಸಿಯ ಅಪ್ರಾಪ್ತ ಮಗನಿಗೆ ತಂದೆಯ ಫೋನ್‌ನಲ್ಲಿ ಅರ್ಜಿಯನ್ನು ಡೌನ್‌ಲೋಡ್ ಮಾಡುವಂತೆ ಹೇಳಿ ಬ್ಯಾಂಕ್ ಖಾತೆಯಿಂದ ಸುಮಾರು ₹ 9 ಲಕ್ಷ ಹಣವನ್ನು ದೋಚಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಬುಧವಾರ ಸಂಜೆ ಘಟನೆ ನಡೆದಿದೆ. ಈ ಸಂಬಂಧ ಕೊರಡಿ ನಿವಾಸಿ ಅಶೋಕ್ ಮನ್ವಾಟೆ ಎಂಬುವವರು ದೂರು ದಾಖಲಿಸಿದ್ದಾರೆ ಎಂದಿದ್ದಾರೆ.

ಸಂತ್ರಸ್ತನ 15 ವರ್ಷದ ಮಗ ತಂದೆಯ ಫೋನ್ ಬಳಸುತ್ತಿದ್ದಾಗ ಅಪರಿಚಿತ ಸಂಖ್ಯೆಯಿಂದ ಕರೆ ಸ್ವೀಕರಿಸಿದ್ದಾನೆ. ಕರೆ ಮಾಡಿದವರು ಡಿಜಿಟಲ್ ಪಾವತಿ ಕಂಪನಿಯ ಗ್ರಾಹಕ ಕೇರ್ ಕಾರ್ಯನಿರ್ವಾಹಕರೆಂದು ತಮ್ಮನ್ನು ಪರಿಚಯಿಸಿಕೊಂಡಿದ್ದಾರೆ. ಆ ಮೊಬೈಲ್ ಸಂಖ್ಯೆಯು ಮನ್ವಾಟೆ ಅವರ ಬ್ಯಾಂಕ್ ಖಾತೆಗೆ ಲಿಂಕ್ ಆಗಿತ್ತು.

ADVERTISEMENT

ತಂದೆಯ ಡಿಜಿಟಲ್ ಪಾವತಿ ಖಾತೆಯ ಕ್ರೆಡಿಟ್ ಮಿತಿಯನ್ನು ಹೆಚ್ಚಿಸುವುದಾಗಿ ತಿಳಿಸಿದ ಕರೆ ಮಾಡಿದವ, ಹುಡುಗನಿಗೆ ರಿಮೋಟ್ ಡೆಸ್ಕ್‌ಟಾಪ್ ಸಾಫ್ಟ್‌ವೇರ್‌ನ ಅಪ್ಲಿಕೇಶನ್ ಅನ್ನು ಫೋನ್‌ನಲ್ಲಿ ಡೌನ್‌ಲೋಡ್ ಮಾಡುವಂತೆ ತಿಳಿಸಿದ್ದಾನೆ. ಹುಡುಗ ಆ್ಯಪ್ ಅನ್ನು ಡೌನ್‌ಲೋಡ್ ಮಾಡಿದ ಕೂಡಲೇ, ಆ್ಯಪ್‌ ಮೂಲಕ ಫೋನ್‌ನ ರಿಮೋಟ್ ಪಡೆದು ಬ್ಯಾಂಕ್ ಖಾತೆಯಿಂದ ₹ 8.95 ಲಕ್ಷವನ್ನು ಕಸಿದುಕೊಂಡಿದ್ದಾನೆ.

ಸದ್ಯ ಐಪಿಸಿ ಸೆಕ್ಷನ್ 419 (ವ್ಯಕ್ತಿಯಿಂದ ಮೋಸ), 420 (ಮೋಸ) ಮತ್ತು ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.