ADVERTISEMENT

ಉತ್ತರ ಪ್ರದೇಶ | ಮಾವಿನ ತಳಿಗೆ ‘ರಾಜನಾಥ ಮಾವು’ ಎಂದು ಹೆಸರಿಟ್ಟ ಮ್ಯಾಂಗೋ ಮ್ಯಾನ್

ಪಿಟಿಐ
Published 6 ಜೂನ್ 2025, 6:08 IST
Last Updated 6 ಜೂನ್ 2025, 6:08 IST
<div class="paragraphs"><p>ಮಾವಿನ ತಳಿಗೆ ‘ರಾಜನಾಥ ಮಾವು’ ಎಂದು ಹೆಸರಿಟ್ಟ ಬೆಳೆಗಾರ</p></div>

ಮಾವಿನ ತಳಿಗೆ ‘ರಾಜನಾಥ ಮಾವು’ ಎಂದು ಹೆಸರಿಟ್ಟ ಬೆಳೆಗಾರ

   

ಲಖನೌ: ಉತ್ತರ ಪ್ರದೇಶದ ಲಖನೌನ ಮಾವು ಬೆಳೆಗಾರರೊಬ್ಬರು ತಾವು ಬೆಳೆದ ಹೊಸ ಬಗೆಯ ಮಾವಿನ ತಳಿಗೆ ರಕ್ಷಣಾ ಸಚಿವ ರಾಜನಾಥ ಸಿಂಗ್‌ ಅವರ ಹೆಸರಿಟ್ಟಿದ್ದಾರೆ.

ಭಾರತದ ‘ಮ್ಯಾಂಗೋ ಮ್ಯಾನ್’ ಖ್ಯಾತಿಯ ಕಲಿಮುಲ್ಲಾ ಖಾನ್‌, ಮಾವಿನ ತಳಿಗೆ ‘ರಾಜನಾಥ ಮಾವು’ ಎಂದು ಹೆಸರಿಟ್ಟಿದ್ದಾರೆ.

ADVERTISEMENT

ಈ ಹಿಂದೆಯೂ ಖಾನ್‌ ಅವರು ಮಾವಿನ ತಳಿಗಳಿಗೆ ಭಾರತದ ಜನಪ್ರಿಯ ವ್ಯಕ್ತಿಗಳ ಹೆಸರನ್ನು ಇಟ್ಟಿದ್ದಾರೆ. ಉದಾಹರಣೆಗೆ ಸಚಿನ್‌ ತೆಂಡೂಲ್ಕರ್‌., ಐಶ್ವರ್ಯಾ  ರೈ, ಅಖಿಲೇಶ್ ಯಾದವ್, ಸೋನಿಯಾ ಗಾಂಧಿ, ನರೇಂದ್ರ ಮೋದಿ, ಅಮಿತ್‌ ಶಾ... ಹೀಗೆ ಹಲವರ ಹೆಸರುಗಳನ್ನು ಇಟ್ಟಿದ್ದಾರೆ. 

ಕೃಷಿ ಕ್ಷೇತ್ರಕ್ಕೆ ಖಾನ್‌ ಅವರ ವಿಶಿಷ್ಟ ಕೊಡುಗೆಗಾಗಿ ಕೇಂದ್ರ ಸರ್ಕಾರ ಪದ್ಮಶ್ರೀ ಪ್ರಶಸ್ತಿಯನ್ನೂ ನೀಡಿ ಗೌರವಿಸಿದೆ.  

ತಮ್ಮ ಹೊಸ ಮಾವಿನ ತಳಿಯ ಬಗ್ಗೆ ಪಿಟಿಐ ಜತೆ ಮಾತನಾಡಿರುವ ಖಾನ್‌, ‘ದೇಶಕ್ಕೆ ಅರ್ಥಪೂರ್ಣ ಕೊಡುಗೆ ನೀಡಿದ ವ್ಯಕ್ತಿಗಳ ಹೆಸರನ್ನು ಮಾವಿನ ತಳಿಗೆ ಇಡುತ್ತೇನೆ. ಮುಂದಿನ ತಲೆಮಾರುಗಳವರೆಗೂ ಅವರ ಹೆಸರು ಉಳಿಯಲಿ ಎನ್ನುವುದು ಇದರ ಉದ್ದೇಶ. ಕೆಲವೊಮ್ಮೆ ಜನ ಉತ್ತಮ ನಾಯಕನನ್ನು ಮರೆಯುತ್ತಾರೆ. ಆದರೆ ಮಾವಿನ ಹೆಸರನ್ನು ಕೇಳಿದಾಗ ಅವರ ಹೆಸರಿನೊಂದಿಗೆ ಅವರು ಮಾಡಿದ ಉತ್ತಮ ಕೆಲಸಗಳು ನೆನಪಿಗೆ ಬರುತ್ತವೆ’ ಎಂದರು. 

‘ಈಗ ರಾಜನಾಥ ಸಿಂಗ್ ಅವರ ಹೆಸರಿಡುವುದಕ್ಕೆ ಕಾರಣವೆಂದರೆ, 'ರಾಜನಾಥ ಸಿಂಗ್ ಅವರು ಚಿಂತನಾಶೀಲ ವ್ಯಕ್ತಿ. ಅವರು ಪ್ರಾಮಾಣಿಕವಾಗಿ ಶಾಂತಿ ಬಯಸುತ್ತಾರೆಯೇ ಹೊರತು ಯುದ್ಧವನ್ನಲ್ಲ ಎಂಬುದು ಪಾಕಿಸ್ತಾನ ಕುರಿತ ಚರ್ಚೆಯ ವೇಳೆ ತಿಳಿಯಿತು. ಹಾಗಾಗಿಯೇ, ಹೊಸ ತಳಿಗೆ ಅವರ ಹೆಸರಿಟ್ಟಿದ್ದೇನೆ’ ಎಂದರು.

‘ಲಖನೌನ ಮಲಿಹಾಬಾದ್‌ ಪ್ರದೇಶದಲ್ಲಿ 1,300 ರೀತಿಯ ಮಾವಿನ ತಳಿಗಳಿದ್ದವು. ಆದರೆ ಕಾಲ ಕಳೆದಂತೆ ಹಲವು ತಳಿಗಳು ಕಣ್ಮರೆಯಾಗಿವೆ. ಅವುಗಳಲ್ಲಿ ಕೆಲವನ್ನು ಸಂರಕ್ಷಿಸುವ ಯತ್ನ ಮಾಡಿದ್ದೇನೆ. ಸದ್ಯ 300ಕ್ಕೂ ಹೆಚ್ಚು ವಿಧದ ತಳಿಗಳ ಮಾವು ನನ್ನ ತೋಟದಲ್ಲಿವೆ’ ಎಂದು ಖಾನ್‌ ಹೇಳಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.