
ಪಿಟಿಐ
ಇಂಪಾಲ: ಮಣಿಪುರದ ಕಾಕಚಿಂಗ್ ಜಿಲ್ಲೆಯ ವಾಬಗೈ ನಟೆಖೋಂಗ್ ತುರೆನ್ಮೈ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಹಾಗೂ ಅಪಾರ ಪ್ರಮಾಣದ ಸ್ಫೋಟಕಗಳನ್ನು ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ.
ಒಂದು ಎಂ–16 ರೈಫಲ್, ಒಂದು ಎಸ್‌ಎಲ್‌ಆರ್, ಒಂದು ಸಿಂಗಲ್–ಬ್ಯಾರೆಲ್ ಗನ್, ಎರಡು ಸಿಂಗಲ್–ಬ್ಯಾರೆಲ್ ಬೋಲ್ಟ್– ಆಕ್ಷನ್ ರೈಫಲ್‌ಗಳು ಮತ್ತು 7.65 ಎಂಎಂ ಪಿಸ್ತೂಲ್, 10 ಗ್ರೆನೇಡ್‌ಗಳು, ನಾಲ್ಕು ಡಿಟೋನೇಟರ್‌ಗಳು, 3 ಕೆ.ಜಿ ತೂಕದ ಸುಧಾರಿತ ಸ್ಫೋಟಕ ಸಾಧನ, ಒಂದು ಸ್ಫೋಟಕ ಶೆಲ್, ಒಂದು 51 ಎಂಎಂ ಮಾರ್ಟರ್ ಬಾಂಬ್, ಆರು ಅಶ್ರುವಾಯು ಶೆಲ್‌ಗಳು ಮತ್ತು 71 ಸಜೀವ ಗುಂಡುಗಳು, ಕ್ವಾಡ್‌ಕಾಪ್ಟರ್ ಡ್ರೋನ್ ಹಾಗೂ ಅದಕ್ಕೆ ಸಂಬಂಧಿತ ಪರಿಕರಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಪೊಲೀಸರು ಗುರುವಾರ ತಿಳಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.