ಪ್ರಧಾನಿ ನರೇಂದ್ರ ಮೋದಿ
ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಮನ್ ಕಿ ಬಾತ್‌ನ 105ನೇ ಸಂಚಿಕೆಯಲ್ಲಿ ಜರ್ಮನಿಯ ಕ್ಯಾಸ್ಮೆ ಅವರು ಭಾರತೀಯ ಸಂಗೀತದ ಬಗೆಗಿನ ವಿಶೇಷ ಒಲವನ್ನು ಹೊಂದಿರುವ ಬಗ್ಗೆ ಮಾತನಾಡಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಅವರು, ದೃಷ್ಟಿ ಕಳೆದುಕೊಂಡಿರುವ ಜರ್ಮನಿಯ 21 ವರ್ಷದ ಕ್ಯಾಸ್ಮೆ ಅವರಿಗೆ ವಿಕಲಚೇತನತೆ ಎಂದೂ ಅಡ್ಡಿಯಾಗಿಲ್ಲ. ಭಾರತೀಯ ಭಾಷೆಗಳಲ್ಲಿ ಕ್ಯಾಸ್ಮೆ ಅವರು ಹಾಡುವುದನ್ನು ಕೇಳಿದರೆ ನೀವು ಮಂತ್ರಮುಗ್ಧರಾಗುತ್ತೀರಿ. ಸಂಗೀತ ಬಗೆಗೆ ಅಪಾರ ಒಲವನ್ನು ಹೊಂದಿರುವ ಅವರು ಕನ್ನಡ ಭಾಷೆಯಲ್ಲೂ ಹಾಡಿದ್ದಾರೆ. ಕ್ಯಾಸ್ಮೆ ಹಾಡಿರುವ ಕ್ಲಿಪ್ ಒಂದನ್ನು ಇಂದು( ಸೆಪ್ಟೆಂಬರ್ 24) ಮನ್ ಕಿ ಬಾತ್ ಕಾರ್ಯಕ್ರಮದಲ್ಲಿ ಪ್ಲೇ ಮಾಡಿದ್ದಾರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.