ADVERTISEMENT

ರಾಜ್ಯಸಭಾ ಉಪಾಧ್ಯಕ್ಷ ಸ್ಥಾನಕ್ಕೆ ಮನೋಜ್ ಝಾ ಅಭ್ಯರ್ಥಿ

ಸೆ. 14ರಂದು ನಡೆಯಲಿರುವ ಚುನಾವಣೆ

ಪಿಟಿಐ
Published 10 ಸೆಪ್ಟೆಂಬರ್ 2020, 11:48 IST
Last Updated 10 ಸೆಪ್ಟೆಂಬರ್ 2020, 11:48 IST
ಮನೋಜ್ ಝಾ (ಮಧ್ಯದಲ್ಲಿರುವವರು ಕಪ್ಪು ಬಟ್ಟೆ ಧರಿಸಿರುವವರು)
ಮನೋಜ್ ಝಾ (ಮಧ್ಯದಲ್ಲಿರುವವರು ಕಪ್ಪು ಬಟ್ಟೆ ಧರಿಸಿರುವವರು)   

ನವದೆಹಲಿ: ರಾಜ್ಯಸಭಾ ಉಪಾಧ್ಯಕ್ಷ ಸ್ಥಾನಕ್ಕಾಗಿ ಇದೇ 14ರಂದು ನಡೆಯಲಿರುವ ಚುನಾವಣೆಗೆ ಆರ್‌ಜೆಡಿ ನಾಯಕ ಮನೋಜ್ ಝಾ ಅವರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲು ವಿವಿಧ ಪಕ್ಷಗಳು ಗುರುವಾರ ನಿರ್ಧರಿಸಿವೆ.

ವಿವಿಧ ಪಕ್ಷಗಳ ಮುಖಂಡರ ಸಮ್ಮುಖದಲ್ಲಿ ಶುಕ್ರವಾರ ಮನೋಜ್ ಅವರು ತಮ್ಮ ನಾಮಪತ್ರವನ್ನು ಸಲ್ಲಿಸಲಿದ್ದಾರೆ.

ಎನ್‌ಡಿಎ ಪರ ಅಭ್ಯರ್ಥಿ ಜೆಡಿಯುನ ಹರಿವಂಶ್ ಅವರ ವಿರುದ್ಧ ಮನೋಜ್ ಸ್ಪರ್ಧಿಸಲಿದ್ದಾರೆ. ಹರಿವಂಶ್ ಅವರು ಈ ಹಿಂದಿನ ಅವಧಿಯಲ್ಲಿ ರಾಜ್ಯಸಭಾ ಉಪಾಧ್ಯಕ್ಷರಾಗಿದ್ದರು.

ADVERTISEMENT

ರಾಜ್ಯಸಭೆಯ ವಿರೋಧಪಕ್ಷದ ನಾಯಕ ಗುಲಾಂ ನಬಿ ಆಜಾದ್, ಕಾಂಗ್ರೆಸ್ ಉಪನಾಯಕ ಆನಂದ ಶರ್ಮಾ, ಕಾಂಗ್ರೆಸ್ ಮುಖ್ಯ ಸಚೇತಕ ಆರ್.ಎಸ್. ಜೈರಾಂ ರಮೇಶ್, ಟಿಎಂಸಿಯ ಇತರ ನಾಯಕರು ಸೇರಿದಂತೆ ಎಡಪಕ್ಷಗಳು, ಡಿಎಂಕೆ, ಎಎಪಿ ಹಾಗೂ ಇತರ ಪಕ್ಷಗಳ ನಾಯಕರು ಮನೋಜ್ ಝಾ ಅವರು ನಾಮಪತ್ರ ಸಲ್ಲಿಸುವಾಗ ಹಾಜರಿರುವರು ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.