ADVERTISEMENT

ಉಗ್ರ ಕೃತ್ಯಕ್ಕೆ ಸಂಚು: ಕೇರಳದಲ್ಲಿ ಸಿಪಿಐ(ಎಂ) ಕಾರ್ಯಕರ್ತ ಬಂಧನ

ಪಿಟಿಐ
Published 14 ಸೆಪ್ಟೆಂಬರ್ 2021, 10:59 IST
Last Updated 14 ಸೆಪ್ಟೆಂಬರ್ 2021, 10:59 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಮಲಪ್ಪುರಂ, ಕೇರಳ: ಕೇರಳ ಪೊಲೀಸ್‌ನ ಭಯೋತ್ಪಾದನಾ ವಿರೋಧಿ ದಳದ (ಎಟಿಎಸ್‌) ಸಿಬ್ಬಂದಿ ಮಂಗಳವಾರ ಸಿಪಿಐ (ಮಾವೋವಾದಿ) ಕಾರ್ಯಕರ್ತ ಸಿ.ಪಿ.ಉಸ್ಮಾನ್‌ ಎಂಬಾತನನ್ನು ಬಂಧಿಸಿದ್ದಾರೆ..

ಈತನ ವಿರುದ್ಧ 2019ರಲ್ಲಿ ಪ್ರಕರಣ ದಾಖಲಾಗಿತ್ತು. ರಾಜ್ಯದಲ್ಲಿ ಭಯೋತ್ಪಾದನಾ ಚಟುವಟಿಕೆ ವಿಸ್ತರಿಸುವ ಸಂಘಟನೆಯೊಂದರ ಜೊತೆಗೆ ಸಕ್ರಿಯವಾಗಿ ಗುರುತಿಸಿಕೊಂಡಿದ್ದ ಆರೋಪವಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಲವು ವರ್ಷಗಳಿಂದ ತಲೆಮರೆಸಿಕೊಂಡಿದ್ದ. ಈತನ ವಿರುದ್ಧ ಮೊದಲಿಗೆ ಕೋಯಿಕ್ಕೊಡ್‌ನ ಪಂತೀರಂಕಾವು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ತನಿಖೆಯನ್ನು ಎನ್‌ಐಎ ಕೈಗೊಂಡಿತ್ತು.

ADVERTISEMENT

ಪ್ರಕರಣ ಈ ಸಂಬಂಧ ಈಗಾಗಲೇ ಅಲಾನ್‌, ತ್ವಾವಹಾ ಮತ್ತು ವಿಜಿತ್‌ ವಿಜಯನ್‌ ಎಂಬವರನ್ನು ಈಗಾಗಲೇ ಬಂಧಿಸಲಾಗಿದೆ. ಇವರ ವಿರುದ್ಧ ಐಪಿಸಿ ಹಾಗೂ ಹಾಗೂ ಕಾನೂನುಬಾಹಿರ ಚಟುವಟಿಕೆಗಳ ನಿಗ್ರಹ ಕಾಯ್ದೆಯ ವಿವಿಧ ಸೆಕ್ಷನ್‌ಗಳ ಅನ್ವಯ ಪ್ರಕರಣ ದಾಖಲಿಸಿದ್ದು, ಎರ್ನಾಕುಲಂನ ವಿಶೇಷ ಕೋರ್ಟ್‌ನಲ್ಲಿ ಎನ್‌ಎಐ ಆರೋಪಪಟ್ಟಿಯನ್ನೂ ಸಲ್ಲಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.