ADVERTISEMENT

ಮಸೂದ್‌ಗೆ ನಿಷೇಧ: ಜರ್ಮನಿ ಪ್ರಸ್ತಾವ

ಜಾಗತಿಕ ಭಯೋತ್ಪಾದಕ ಪಟ್ಟಿಗೆ ಮಸೂದ್‌

ಪಿಟಿಐ
Published 20 ಮಾರ್ಚ್ 2019, 19:12 IST
Last Updated 20 ಮಾರ್ಚ್ 2019, 19:12 IST

ನವದೆಹಲಿ: ಜೈಷ್‌ –ಎ–ಮೊಹಮದ್ (ಜೆಇಎಂ) ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ಜಾಗತಿಕ ಭಯೋತ್ಪಾದಕ ಪಟ್ಟಿಗೆ ಸೇರಿಸುವ ಪ್ರಕ್ರಿಯೆಗೆ ಯೂರೋಪಿಯನ್‌ ಒಕ್ಕೂಟದ ಮೂಲಕ ಜರ್ಮನಿ ಚಾಲನೆ ನೀಡಿದೆ.‌

ಜಾಗತಿಕ ಭಯೋತ್ಪಾದಕ ಸಂಘಟನೆ ಎಂದು ಘೋಷಿಸುವ ವಿಶ್ವಸಂಸ್ಥೆಯ ನಿರ್ಧಾರವನ್ನು ಚೀನಾ ವಿರೋಧಿಸಿದ ಬೆನ್ನಲ್ಲೇ ಜರ್ಮನಿ ಈ ಪ್ರಸ್ತಾಪ ಮುಂದಿಟ್ಟಿದೆ ಎಂದು ಭಾರತದ ರಾಜತಾಂತ್ರಿಕ ಕಚೇರಿ ಮೂಲಗಳು ತಿಳಿಸಿವೆ.

ಭಯೋತ್ಪಾದಕ ಪಟ್ಟಿಗೆ ಸೇರಿಸುವ ಸಂಬಂಧ ಯುರೋಪಿಯನ್‌ ಒಕ್ಕೂಟದಲ್ಲಿರುವ ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳ ಜತೆ ಜರ್ಮನಿ ಚರ್ಚೆ ನಡೆಸಲಿದೆ ಎಂದು ರಾಜತಾಂತ್ರಿಕ ಅಧಿಕಾರಿಗಳು ತಿಳಿಸಿದ್ದು, ಇದರಿಂದಾಗಿ ಒಕ್ಕೂಟದಲ್ಲಿರುವ 28 ದೇಶಗಳಲ್ಲಿ ಮಸೂದ್‌ ಪ್ರಯಾಣಕ್ಕೆ ನಿಷೇಧ ಹೇರಬಹುದಾಗಿದೆ ಹಾಗೂ ಆತನಿಗೆ ಸಂಬಂಧಿಸಿದ ಸ್ವತ್ತುಗಳ ಮೇಲೆ ನಿರ್ಬಂಧ ಹೇರಬಹುದಾಗಿದೆ
ಎಂದಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.