ADVERTISEMENT

ನಖಾಬ್‌ ವಿವಾದ: ನಿತೀಶ್‌ ಮಧ್ಯಪ್ರವೇಶಕ್ಕೆ ಮಾಯಾವತಿ ಒತ್ತಾಯ

ಪಿಟಿಐ
Published 20 ಡಿಸೆಂಬರ್ 2025, 15:30 IST
Last Updated 20 ಡಿಸೆಂಬರ್ 2025, 15:30 IST
ಮಾಯಾವತಿ
ಮಾಯಾವತಿ   

ಲಖನೌ: ‘ವೈದ್ಯೆಯೊಬ್ಬರ ನಖಾಬ್‌ ಎಳೆದ ವಿಚಾರಕ್ಕೆ ಸಂಬಂಧಿಸಿದಂತೆ ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ವಿಷಾದ ವ್ಯಕ್ತಪಡಿಸಬೇಕು ಮತ್ತು ವಿವಾದವನ್ನು ಅಂತ್ಯಗೊಳಿಸಲು ಯತ್ನಿಸಬೇಕು’ ಎಂದು ಬಿಎಸ್‌ಪಿ ಮುಖ್ಯಸ್ಥೆ ಮಾಯಾವತಿ ಶನಿವಾರ ಕರೆ ನೀಡಿದ್ದಾರೆ.

‘ನಖಾಬ್‌ ವಿವಾದವು ದುರದೃಷ್ಟಕರ. ಕೆಲ ಸಚಿವರ ಹೇಳಿಕೆಗಳಿಂದ ವಿವಾದ ಮುಂದುವರಿಯುತ್ತಲೇ ಇದೆ. ಈ ಪ್ರಕರಣವು ಮಹಿಳೆಯರ ಸುರಕ್ಷತೆ ಮತ್ತು ಘನತೆಗೆ ಸಂಬಂಧಿಸಿದೆ. ಹೀಗಾಗಿ ನಿತೀಶ್‌ ಕುಮಾರ್‌ ಅವರು ನೇರವಾಗಿ ಮಧ್ಯಪ್ರವೇಶಿಸುವ ಮೂಲಕ ವಿವಾದವನ್ನು ಬಗೆಹರಿಸಬೇಕಿದೆ’ ಎಂದು ‘ಎಕ್ಸ್‌’ನಲ್ಲಿ ಒತ್ತಾಯಿಸಿದ್ದಾರೆ. 

ನೇಮಕಾತಿ ಪತ್ರ ವಿತರಣೆ ವೇಳೆ ವೈದ್ಯೆಯೊಬ್ಬರು ಧರಿಸಿದ್ದ ನಖಾಬ್‌ ಅನ್ನು ನಿತೀಶ್‌ ಕುಮಾರ್‌ ಅವರು ಎಳೆದಿದ್ದು, ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಘಟನೆ ಬೆನ್ನಲ್ಲೇ, ಮುಖ್ಯಮಂತ್ರಿ ಅವರು ಕ್ಷಮೆಯಾಚಿಸಬೇಕು ಎಂದು ವಿರೋಧ ಪಕ್ಷಗಳು ಆಗ್ರಹಿಸುತ್ತಿವೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.